March 13, 2026

ಮನೆಯಲ್ಲಿ ವಿದ್ಯುತ್ ಅವಘಡ: ತಾಯಿ ಮತ್ತು ಮಗ ಮೃತ್ಯು, ನಾಲ್ವರು ಗಾಯ

0
n67069399417513542535992639bbf6fd275fe4bda5600fa1b33e665e7779f642e0af2ba46f788a78901ebd.jpg

ದಾವಣಗೆರೆ: ಮನೆಯಲ್ಲಿ ವಿದ್ಯುತ್ ಶಾರ್ಟ್ ನಿಂದ ಬೆಂಕಿ ಕಾಣಿಸಿಕೊಂಡು ತಾಯಿ, ಮಗ ಮೃತಪಟ್ಟು ನಾಲ್ವರು ಗಾಯಗೊಂಡ ಘಟನೆ ನಗರದ ಕಾಯಿಪೇಟೆಯಲ್ಲಿ ಮಂಗಳವಾರ (ಜು.1) ನಸುಕಿನಲ್ಲಿ ಸಂಭವಿಸಿದೆ.

ಮೃತರನ್ನು ವಿಮಲಾ (75) ಮತ್ತು ಅವರ ಮಗ ಕುಮಾರ (35) ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಗಾಯಗೊಂಡಿರುವ ನಾಲ್ವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಮನೆಯಲ್ಲಿ ಒಟ್ಟು ಆರು ಜನರಿದ್ದರು. ನಾಲ್ವರು ತಕ್ಷಣವೇ ಹೊರಬಂದರೂ, ದಟ್ಟ ಹೊಗೆಯಿಂದಾಗಿ ವಿಮಲಾ ಮತ್ತು ಕುಮಾರ ಅವರು ಹೊರಬರಲು ಸಾಧ್ಯವಾಗಲಿಲ್ಲ ಎಂದು ಬಸವನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ತಕ್ಷಣ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ತಾಯಿ ಮತ್ತು ಮಗನನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದರು. ಆದರೆ, ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು.

Leave a Reply

Your email address will not be published. Required fields are marked *

error: Content is protected !!