ಬಂಟ್ವಾಳ: ವಿಜಯಲಕ್ಷ್ಮೀ ಸಮೂಹ ಸಂಸ್ಥೆಗಳ ಮಾಲೀಕ, ಹಿರಿಯ ಉದ್ಯಮಿ ಶ್ರೀನಾಥ್ ಪ್ರಭು ನಿಧನ
ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ನಿವಾಸಿ, ವಿಜಯಲಕ್ಷ್ಮೀ ಸಮೂಹ ಸಂಸ್ಥೆಗಳ ಮಾಲೀಕ ಮರಕಡ ಶ್ರೀನಾಥ್ ಪ್ರಭು (70) ಇವರು ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ನಿಧನರಾದರು.
ಮೃತರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ. ಸಿಮೆಂಟ್ ಮತ್ತು ಸ್ಟೀಲ್ ಉದ್ಯಮಿಯಾಗಿದ್ದ ಇವರು ಕೊಡುಗೈ ದಾನಿಯಾಗಿ, ವಿವಿಧ ಧಾರ್ಮಿಕ ಕ್ಷೇತ್ರ ಗಳ ಅಭಿವೃದ್ಧಿಗೆ ಕೊಡುಗೆ ಸಳ್ಳಿಸಿದ್ದರು.
ಬಿ.ಸಿ ರೋಡಿನ ಹಳೆ ಎಲ್ ಐಸಿ ಕಚೇರಿ ಹಿಂಬದಿ ಸ್ವಗೃಹದಲ್ಲಿ ಜುಲೈ 1ರಂದು ಬೆಳಿಗ್ಗೆ 10 ಗಂಟೆಗೆ ಮೃತರ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.





