ವಿಟ್ಲ: ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ದಿ|ಎಲ್. ಎನ್. ಕೂಡೂರು ರವರ ಪುಣ್ಯಸ್ಮರಣೆ
ವಿಟ್ಲ ಬಸವನಗುಡಿ ಯಲ್ಲಿರುವ ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಯಲ್ಲಿ ದಿನಾಂಕ 30-6-2025ನೇ ಸೋಮವಾರ ದಂದು ದಿ | ಎಲ್. ಏನ್. ಕೂಡೂರು ರವರ ಸ್ಮರಣಾರ್ಥ ವಾಗಿ ಸಂಸ್ಮರಣಾ ಕಾರ್ಯಕ್ರಮ ಜರುಗಿತು.
ಇದರ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಸಂಸ್ಥೆ ಯ ಅಧ್ಯಕ್ಷರಾದ ಶೀಧರ್ ಶೆಟ್ಟಿ ಯವರು ಕೂಡೂರು ಅವರ ಜೊತೆಗಿನ ತಮ್ಮ ಒಡನಾಟ ವನ್ನು ಸ್ಮರಿಸಿದರು. ಅವರ ಆದರ್ಶಗಳನ್ನು ಎಲ್ಲರೂ ಜೊತೆಗೂಡಿ ಪಾಲಿಸೋಣ ಎಂದು ಕರೆ ಕೊಟ್ಟರು. ಆಡಳಿತ ಮಂಡಳಿಯ ಪದಾಧಿಕಾರಿಗಳೆಲ್ಲರೂ ಕೂಡೂರು ರವರ ಜೊತೆಗಿನ ತಮ್ಮ ಸವಿ ನೆನಪುಗಳನ್ನು ಮೆಲುಕು ಹಾಕಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಮೋಹನ ಎ, ಜತೆ ಕಾರ್ಯದರ್ಶಿ ಶ್ರೀ ಪ್ರಕಾಶ್ ಕುಕ್ಕಿಲ, ಖಜಾಂಚಿ ಪ್ರಭಾಕರ ಶೆಟ್ಟಿ, ನಿರ್ದೇಶಕರುಗಳಾದ ಮೋನಪ್ಪ ಶೆಟ್ಟಿ, ಹಸನ್ ವಿಟ್ಲ, ಗೋಕುಲ್ ಶೇಟ್, ವಿಜಯ ಪಾಯಸ್, ಶ್ರೀಮತಿ ಸಿರಿ ಎಲ್ ಎನ್ ಕೂಡೂರು ಮತ್ತು ಕುಟುಂಬದವರು, ಶಾಲಾ ಆಡಳಿತ ಅಧಿಕಾರಿ ರಾಧಾಕೃಷ್ಣ ಎರಂಬು, ಪ್ರಾಂಶುಪಾಲ ಜಯರಾಮ ರೈ, ಉಪ ಪ್ರಾಂಶುಪಾಲೆ ಜ್ಯೋತಿಶೆಣೈ, ಶಿಕ್ಷಕರು, ಶಿಕ್ಷಕೇತರರು ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶ್ರೀಮತಿ ಝಕೀಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.





