March 13, 2026

ಸುಳ್ಯ: ಕೆ ಎಸ್ ಆರ್ ಟಿ ಸಿ ಬಸ್ ಗಳ ನಡುವೆ ಅಪಘಾತ ಪ್ರಕರಣ: ಗಾಯಾಳು ಮಹಿಳೆ ಮೃತ್ಯು

0
image_editor_output_image-104093648-1750864999304

ಸುಳ್ಯ: ಕೆ.ಎಸ್.ಆರ್.ಟಿ.ಸಿ ಬಸ್ ಗಳ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ಮಹಿಳೆ ಸಾವನ್ನಪ್ಪಿ ಇಬ್ಬರು ಗಂಭೀರ ಗಾಯಗೊಂಡು ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ಸುಳ್ಯ ಅರಂತೋಡು ಉದಯನಗರ ಸಮೀಪ ಬುಧವಾರ ನಡೆದಿದೆ.

ಘಟನೆ ಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ. ಒಂದು ಬಸ್ ಮಡಿಕೇರಿ ಕಡೆಯಿಂದ ಸುಳ್ಯ ಕಡೆ ಬರುತ್ತಿತ್ತು. ಇನ್ನೊಂದು ಸುಳ್ಯ ಕಡೆಯಿಂದ ಮಡಿಕೇರಿ ಕಡೆ ಹೋಗುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದೆ.

ಮೃತರನ್ನು ಕುಶಾಲನಗರದ ಗುಡ್ಡೆ ಹೊಸೂರು ನಿವಾಸಿ ಭಾರತಿ (50) ಎಂದು ಗುರುತಿಸಲಾಗಿದ್ದು, ಮಂಗಳೂರಿನಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳುತ್ತಿದ್ದಾಗ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಗಾಯಗೊಂಡವರಲ್ಲಿ ಚೈತ್ರಾ (22), ಮಾಯಿಲ್ಪ್ (43), ಶ್ರಾವ್ಯ ಶ್ರೀ (24), ಕುಮುದಿನಿ (24), ಯಮುನಾ (55), ವೇದಿಕಾ (10), ಯಕ್ಷಿತಾ (22), ಸಮದ್ (38), ಮುತ್ತಮ್ಮ (37), ಚಂದ್ರಾವತಿ (43), ತಿರುಮಲೇಶ್ವರ (49), ಸೋನಿ ಎಚ್‌ಪಿ (21), ಚಿದಾನಂದ (20 ಸುಬ್ರಮಣ್‌), (25 ಸುಬ್ರಮಣ್‌), (5 ವಿಟಬಾರವ), (42), ಕಾವೇರಮ್ಮ (35), ಅಭಿಲಾಷ್ (21), ಜಯಂತ್ (17), ಮತ್ತು ಕರಣ್ (37).

ಅವರನ್ನು ಸುಳ್ಯದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!