ಬೆಳ್ತಂಗಡಿ: ಅಡುಗೆ ಅನಿಲ ಸಮಸ್ಯೆ ಬಗೆಹರಿಸಲು ಎಸ್‌ಡಿಪಿಐ ವತಿಯಿಂದ ಇಂಡೇನ್ ಗ್ಯಾಸ್ ಅಧಿಕಾರಿಯ ಭೇಟಿ
ಬೆಳ್ತಂಗಡಿ: ಬೆಳ್ತಂಗಡಿ ನಗರ ವ್ಯಾಪ್ತಿಯಲ್ಲಿ ಹಲವು ಸಮಯ ಅಡುಗೆ ಅನಿಲ ಅಸಮರ್ಪಕ ಪೂರೈಕೆ ಸಮಸ್ಯೆ ಇದ್ದು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು ಎಂದು ಆಗ್ರಹಿಸಿ ಎಸ್‌ಡಿಪಿಐ ಬೆಳ್ತಂಗಡಿ ನಗರ ಸಮಿತಿ ಅಧ್ಯಕ್ಷರಾದ ರಿಯಾಝ್ ಬೆಳ್ತಂಗಡಿ ಅವರ ನೇತೃತ್ವದ ನಿಯೋಗ ಬೆಳ್ತಂಗಡಿ ಇಂಡೇನ್ ಗ್ಯಾಸ್ ಅಧಿಕಾರಿ ಶಿವ ಕುಮಾರ್ ಭೇಟಿಯಾಗಿ ಮನವಿ ಸಲ್ಲಿಸಿತು.
ಸಮಯಕ್ಕೆ ಸರಿಯಾಗಿ ಅಡುಗೆ ಅನಿಲ ಪೂರೈಕೆ ಯಾಗದೆ ನಾಗರಿಕರು ಸಮಸ್ಯೆಯನ್ನು ಎದುರಿಸುತ್ತಿದ್ದು ಹಲವು ಬಾರಿ ಪುೂರೈಕೆದಾರರಿಗೆ ಈಗಾಗಲೇ ತಿಳಿಸಿದ್ದು ಯಾವುದೇ ಪರಿಹಾರವನ್ನು ಕಂಡಿಲ್ಲ. ಆದ್ದರಿಂದ ಅಡುಗೆ ಅನಿಲದ ವಾಹನವನ್ನು ನಗರ ವ್ಯಾಪ್ತಿಯ ಎಲ್ಲಾ ಪ್ರದೇಶಗಳಿಗೆ ಕಳುಹಿಸಿ ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಬೇಕೆಂದು ಆಗ್ರಹಿಸಿದ್ದಾರೆ.
ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಆದಷ್ಟು ಬೇಗ ಅಡುಗೆ ಅನಿಲ ಸಮಸ್ಯೆಯನ್ನು ಬಗೆಹರಿಸಿ ಕೊಡುವುದಾಗಿ ಭರವಸೆ ನೀಡಿದರು.
ಎಸ್‌ಡಿಪಿಐ ನಿಯೋಗದಲ್ಲಿ ಬೆಳ್ತಂಗಡಿ ಕ್ಷೇತ್ರಾಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ, ನಾಯಕರಾದ ಸಾದಿಕ್ ಲಾಯಿಲ, ಇರ್ಫಾನ್ ಬೆಳ್ತಂಗಡಿ, ಹಕೀಮ್, ಸಲೀಂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.




