March 13, 2026

ಬೆಳ್ತಂಗಡಿ: ಚಾಲಕನ ನಿಯಂತ್ರಣ ಕಳೆದು ಆಟೋ ರಿಕ್ಷಾ ಪಲ್ಟಿ: ಒಬ್ಬ ಮೃತ್ಯು-ಇಬ್ಬರಿಗೆ ಗಾಯ

0
image_editor_output_image786803312-1750605929280

ಬೆಳ್ತಂಗಡಿ : ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾದ ಘಟನೆ ಜೂ. 22ರಂದು ಬದ್ಯಾ‌ರ್ ಸಮೀಪ ನಡೆದಿದೆ.

ಗುರುವಾಯನಕೆರೆಯಿಂದ ಅಳದಂಗಡಿ ಕಡೆಗೆ ಮೂರು ಜನ ಪ್ರಯಾಣಿಸುತ್ತಿದ್ದ ಆಟೋದಲ್ಲಿ ಸಹಸವಾರ ಕುಕ್ಕಳ, ಮಾಲಾಡಿ ಗ್ರಾಮ ಅಣ್ಣಿ ಹೆಗ್ಡೆ ಅವರ ಪುತ್ರ ಚರಣ್ ಹೆಗ್ಡೆ(33ವ) ರವರು ಗಂಭೀರ ಗಾಯವಾಗಿದ್ದು, ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇಬ್ಬರು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತರ ಅಂತ್ಯಕ್ರಿಯೆಯನ್ನು ನಾಳೆ ಸ್ವಗೃಹ ಮಾಲಾಡಿ ಗ್ರಾಮದ ಪೇರಾಡೆಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!