ಕೊಳ್ನಾಡು: ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಸಂಸ್ಥಾಪನ ದಿನಾಚರಣೆ
ವಿಟ್ಲ: ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷ ಜೂನ್ 21 ಸ್ಥಾಪನ ದಿನವಾಗಿ ಆಚರಿಸಿದೆ.
ಇದರ ಅಂಗವಾಗಿ ಕೊಳ್ನಾಡು ಬ್ಲಾಕ್ ವ್ಯಾಪ್ತಿಯ ಪರ್ತಿಪ್ಪಾಡಿಯಲ್ಲಿ ಬ್ಲಾಕ್ ಮಟ್ಟದ ದ್ವಜೋರೋಹಣ ಕಾರ್ಯಕ್ರಮ ನೆರವೇರಿಸಲಾಯಿತು.

ಅಲ್ಲದೆ ಬೂತ್ ಮಟ್ಟದ ಕಡಂಬು, ತಲಿತನೋಜಿ, ಸಾಲೆತೂರು ,ಕರೋಪಾಡಿ, ಕುಕ್ಕಾಜೆ,ಬೊಳಂತೂರು. ಕಡೆಗಳಲ್ಲೂ ಕೂಡ ವಿಜೃಂಬಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ಕಲಂದರ್ ಪರ್ತಿಪ್ಪಾಡಿ ಬ್ಲಾಕ್ ಕಾರ್ಯದರ್ಶಿ ಹೈದರ್ ಆಲಿ ಕ್ಷೇತ್ರ ಸಮಿತಿ ಸದಸ್ಯರಾದ ಅಜೀಜ್ ಕಡಂಬು,ಪಕ್ಷದ ಮುಖಂಡರುಗಳಾದ ಬಶೀರ್ ಕೊಳ್ನಾಡು,ಜಬ್ಬಾರ್ ಮಂಚಿ,ನಾಸಿರ್ ತಾಳಿತನೂಜಿ,ಶರೀಫ್ ಕಡಂಬು,ಮೊಹಮ್ಮದ್ ಬೊಳಂತೂರು,ಜಲೀಲ್ ಕೊಡ್ಲ,ಮುಫ್ತಿ ಮೊಹಮ್ಮದ್,ಸಯ್ಯದ್ ಅಲಿ ಖಾಲಿದ್ ತಲಿತನೋಜಿ ಪಂಚಾಯತ್ ಸದಸ್ಯರಾದ ಮಹಮೂದ್ ಕಡಂಬು,ಹಮೀದ್ ಬೊಳಂತೂರು ಆಯಿಷಾ ಖಾದರ್ ಸಹಿತ ವಿವಿಧ ನಾಯಕರು ಪಕ್ಷದ ಹಿತೈಸಿಗಳು ಭಾಗವಹಿಸಿದ್ದರು




