March 13, 2026

ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ದರ್ಶನ್ ಎಚ್ ವಿ ಅಧಿಕಾರ ಸ್ವೀಕಾರ

0
n669020087175026240052671c72e4ee29def4324349ec0d7ce86547dae9500375a2a5338849cd5955f66e9.jpg

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ದರ್ಶನ್ ಎಚ್ ವಿ ಅವರು ಬುಧವಾರ ಸಂಜೆ ಅಧಿಕಾರ ಸ್ವೀಕರಿಸಿದರು.

ನಿರ್ಗಮನ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ನೂತನ ಜಿಲ್ಲಾಧಿಕಾರಿಗೆ ಅಧಿಕಾರ ಹಸ್ತಾಂತರಿಸಿದರು.

ಮುಲ್ಲೈ ಮುಗಿಲನ್ ಎಂಪಿ ಜೂ.17, 2023ರಂದು ದ.ಕ. ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದೀಗ 2 ವರ್ಷ ಪುರ್ಣಗೊಳಿಸಿರುವ ಬೆನ್ನಲ್ಲೆ ಅವರಿಗೆ ವರ್ಗಾವಣೆಯಾಗಿದೆ.

2016ರ ಐಎಎಸ್‌ ಬ್ಯಾಚ್‌ನ ಅಧಿಕಾರಿಯಾಗಿರುವ ದರ್ಶನ್‌ ಎಚ್‌.ವಿ. ಅವರು ವಾಣಿಜ್ಯ ತೆರಿಗೆಗಳ ಇಲಾಖೆಯ ಬೆಂಗಳೂರಿನ ಸೇವಾ ವಿಶ್ಲೇಷಣೆ ವಿಭಾಗದ ಹೆಚ್ಚುವರಿ ಆಯುಕ್ತರಾಗಿದ್ದರು. ಅದಕ್ಕೂ ಹಿಂದೆ ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ, ಕೋಲಾರ ಜಿ.ಪಂ. ಸಿಇಒ ಆಗಿ ಕರ್ತವ್ಯ ನಿರ್ವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!