ನೆಲ್ಯಾಡಿ: ನಿಲ್ಲಿಸಿದ್ದ ಹಿಟಾಚಿಗೆ ಖಾಸಗಿ ಬಸ್ ಡಿಕ್ಕಿ: ಒಬ್ಬ ಮೃತ್ಯು-ಹಲವರಿಗೆ ಗಾಯ
ನೆಲ್ಯಾಡಿ: ನಿಲ್ಲಿಸಿದ್ದ ಹಿಟಾಚಿಗೆ ಖಾಸಗಿ ಬಷ್ಟೊಂದು ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಹಲವರು ಗಂಭೀರ ಗಾಯಗೊಂಡ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಲಾವತ್ತಡ್ಕ ಎಂಬಲ್ಲಿ ರವಿವಾರ ತಡ ರಾತ್ರಿ ನಡೆದಿದೆ
.ಮೃತ ವ್ಯಕ್ತಿಯನ್ನು ಕಾರ್ಕಳ ಹೆರ್ಮುಂಡೆ ನಿವಾಸಿ ಶಂಕರ ನಾರಾಯಣ ಭಟ್ ಎಂದು ಗುರುತಿಸಲಾಗಿದೆ.
ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಸ್ವೀಪರ್ ಬಸ್ ಲಾವತ್ತಡ್ಕ ಎಂಬಲ್ಲಿ ಹೆದ್ದಾರಿ ಬದಿ ಲಾರಿಯಲ್ಲಿ ನಿಲ್ಲಿಸಲಾಗಿದ್ದ ಹಿಟಾಚಿಗೆ ಢಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಹಲವು ಪ್ರಯಾಣಿಕರು ಗಾಯಗೊಂಡಿದ್ದು, ಗಂಭೀರ ಗಾಯಗೊಂಡ ಶಂಕರ ನಾರಾಯಣ ಭಟ್ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ನೆಲ್ಯಾಡಿ ಹೊರಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




