February 4, 2026

ಅಹಮದಾಬಾದ್: ಏರ್ ಇಂಡಿಯಾ ವಿಮಾನ ಪತನದ ದೃಶ್ಯದ ವೀಡಿಯೋ ವೈರಲ್

0
image_editor_output_image-1025174275-1749723314604

ಅಹಮದಾಬಾದ್:‌ ಗುಜರಾತ್‌ನ ಅಹಮದಾಬಾದ್‌ ವಿಮಾನ ನಿಲ್ದಾಣದ ಬಳಿ ಗುರುವಾರ (ಜೂ.12) ಏರ್‌ ಇಂಡಿಯಾ ವಿಮಾನ ಪತನವಾಗಿದೆ.

ಅಹಮದಾಬಾದ್‌ ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 1:10 ಕ್ಕೆ ಹೊರಟಿದ್ದ ವಿಮಾನ ಟೇಕ್‌ ಆಫ್‌ ಆದ ಕೆಲವೇ ನಿಮಿಷಗಳಲ್ಲಿ ಪತನವಾಗಿದೆ.

ಅಹಮದಾಬಾದ್-ಲಂಡನ್ ಗ್ಯಾಟ್ವಿಕ್ ನಡುವೆ ಸಂಚರಿಸುವ AI171 ವಿಮಾನದ ಬಗ್ಗೆ ವಿಮಾನಯಾನ ಸಂಸ್ಥೆ ಯಾವುದೇ ಮಾಹಿತಿಯನ್ನು ನೀಡದಿದ್ದರೂ, ವಿಮಾನದಲ್ಲಿ 242 ಪ್ರಯಾಣಿಕರಿದ್ದರು ಎಂದು ಮೂಲಗಳು ತಿಳಿಸಿವೆ.

ವಿಮಾನ ಪತನವಾದ ಬಗ್ಗೆ ವಿಡಿಯೋವೊಂದು ವೈರಲ್‌ ಆಗಿದೆ. 17 ಸೆಕೆಂಡುಗಳ ವೀಡಿಯೊದಲ್ಲಿ ವಿಮಾನವು ಮಧ್ಯಾಹ್ನ 1.30 ರ ಸುಮಾರಿಗೆ ಲಂಡನ್ ಗ್ಯಾಟ್ವಿಕ್‌ಗೆ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ವಸತಿ ಪ್ರದೇಶಕ್ಕೆ ಅಪ್ಪಳಿಸುವ ದೃಶ್ಯವಿದೆ.

ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿದಂತೆ 242 ಜನರನ್ನು ಹೊತ್ತೊಯ್ದಿತ್ತು ಎಂದು ವರದಿ ಹೇಳಿದೆ.

ಎಲ್ಲಾ ಸಂವಹನಗಳು ಕಳೆದುಹೋಗುವ ಮೊದಲು ವಿಮಾನದಿಂದ “ಮೇಡೇ” ಕರೆ ಬಂದಿದೆ ಎಂದು ವಾಯು ಸಂಚಾರ ನಿಯಂತ್ರಣ ಮಂಡಳಿ ವರದಿ ಮಾಡಿದೆ. ವಿಮಾನ ಟೇಕ್‌ ಆಫ್‌ ಆದ ತಕ್ಷಣ ವಿಮಾನ ನಿಲ್ದಾಣದ ಪರಿಧಿಯ ಹೊರಗೆ ನೆಲಕ್ಕೆ ಬಿದ್ದಿತು, ಅಪಘಾತದ ಸ್ಥಳದಿಂದ ಭಾರೀ ಕಪ್ಪು ಹೊಗೆ ಏರುತ್ತಿರುವುದು ಕಂಡುಬಂದಿದೆ ಎಂದು ಡಿಜಿಸಿಎ ತಿಳಿಸಿದೆ.

ಈ ಹಾರಾಟವು 8,200 ಗಂಟೆಗಳ ಕಾಲ ಹಾರಾಟದ ಅನುಭವ ಹೊಂದಿರುವ ಟೈಪ್ ಕಮಾಂಡರ್ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಮತ್ತು 1,100 ಗಂಟೆಗಳ ಕಾಲ ಹಾರಾಟದ ಅನುಭವ ಹೊಂದಿರುವ ಪ್ರಥಮ ಅಧಿಕಾರಿ ಕ್ಲೈವ್ ಕುಂದರ್ ಅವರ ನೇತೃತ್ವದಲ್ಲಿತ್ತು.

Leave a Reply

Your email address will not be published. Required fields are marked *

error: Content is protected !!