February 4, 2026

ಗುಜರಾತ್: ಏರ್ ಇಂಡಿಯಾ ವಿಮಾನ ಪತನ

0
ahmedabad_airport_1749717524023_1749717524210.png

ಅಹ್ಮದಾಬಾದ್: ಕನಿಷ್ಠ 200 ಪ್ರಯಾಣಿಕರಿದ್ದ ವಿಮಾನ ಗುಜರಾತ್ ರಾಜಧಾನಿ ಅಹಮದಾಬಾದ್ ನ ವಿಮಾನ ನಿಲ್ದಾಣದ ಬಳಿ ಪತನಗೊಂಡ ಭೀಕರ ಘಟನೆ ಶುಕ್ರವಾರ ಸಂಭವಿಸಿದೆ.

ಗುರುವಾರ ಬೆಳಿಗ್ಗೆ ಅಹಮದಾಬಾದ್ ನಿಂದ ಲಂಡನ್ ಪ್ರಯಾಣ ಬೆಳೆಸುತ್ತಿದ್ದ ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ನೆಲಕ್ಕೆ ಅಪ್ಪಳಿಸಿದೆ ಎಂದು ಹೇಳಲಾಗಿದೆ.

ಅಹಮದಾಬಾದ್‌ನಲ್ಲಿ 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದೆ ಎಂದು ರಾಜ್ಯ ಪೊಲೀಸ್ ನಿಯಂತ್ರಣ ಕೊಠಡಿ ದೃಢಪಡಿಸಿದೆ. ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿದಂತೆ 242 ಜನರನ್ನು ಹೊತ್ತೊಯ್ದಿತ್ತು

ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನವು ಮೇಘನಿನಗರ ಬಳಿ ಪತನಗೊಂಡಿದೆ. ವಿಮಾನ ಅಪಘಾತಕ್ಕೀಡಾದ ಸ್ಥಳವು ವಸತಿ ಪ್ರದೇಶ ಎಂದು ವರದಿಯಾಗಿದೆ. ಆ ಪ್ರದೇಶಕ್ಕೆ ಹೋಗುವ ಎಲ್ಲಾ ರಸ್ತೆಗಳನ್ನು ಮುಚ್ಚಲಾಗಿದೆ.

ಆ ವಿಮಾನವನ್ನು ಏರ್ ಇಂಡಿಯಾ 171 ಎಂದು ಗುರುತಿಸಲಾಗಿದ್ದು, ಆನ್‌ಲೈನ್ ಫ್ಲೈಟ್ ಟ್ರ್ಯಾಕರ್‌ಗಳು ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 1:10 ಕ್ಕೆ ಸೇವೆಯನ್ನು ತೋರಿಸಿದೆ.

133 ಪ್ರಯಾಣಿಕರು ಸೇರಿದಂತೆ 135 ಮಂದಿ ವಿಮಾನದಲ್ಲಿ ಇದ್ದರು ಎಂದು ಹೇಳಲಾಗಿದೆ.

ವಿಮಾನದ ಹಿಂದಿನ ರೆಕ್ಕೆ ಮರಕ್ಕೆ ಬಡಿದ ಪರಿಣಾಮ ದುರಂತ ಸಂಭವಿಸಿದೆ ಎಂದು ಹೇಳಲಾಗಿದ್ದು, ಘಟನೆಯ ಮಾಹಿತಿ ಬರುತ್ತಿದ್ದಂತೆ 7 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ದೌಡಾಯಿಸಿವೆ. ಸ್ಥಳೀಯರ ನೆರವಿನೊಂದಿಗೆ ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

Leave a Reply

Your email address will not be published. Required fields are marked *

error: Content is protected !!