ಜೂನ್ 13 ರಂದು ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್ ಕಲ್ಲಡ್ಕಕ್ಕೆ: ಅಲ್-ಬಿರ್ರ್ ಆಂಗ್ಲ ಮಾಧ್ಯಮ ಶಾಲೆ ಉದ್ಘಾಟನೆ
ಕಲ್ಲಡ್ಕ: ಇಲ್ಲಿನ ಮುಹಿಯುದ್ದೀನ್ ಜುಮಾ ಮಸೀದಿ ಇದರ ಅಧೀನದಲ್ಲಿ ನವೀಕ್ರತಗೊಂಡ ಮದ್ರಸ ಕಟ್ಟಡದ ಉದ್ಘಾಟನೆ, ಅಲ್-ಬಿರ್ರ್ ಆಂಗ್ಲ ಮಾಧ್ಯಮ ಶಾಲೆಯ ಉದ್ಘಾಟನೆ ಹಾಗೂ ಸನ್ಮಾನ ಕಾರ್ಯಕ್ರಮ ಜೂನ್ 13 ರಂದು ಜುಮಾ ನಮಾಜಿನ ಬಳಿಕ ನಂತರ ನಡೆಯಲಿದೆ.
ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯಿದುಲ್ ಉಲಮಾ ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸಲಿದ್ದು, ಅಲ್ ಬಿರ್ರ್ ಸ್ಕೂಲ್ಸ್ ನ ಆಡಳಿತ ನಿರ್ದೇಶಕ ಕೆ.ಪಿ.ಮುಹಮ್ಮದ್ ಕ್ಯಾಲಿಕೆಟ್-ಕೇರಳ, ಮಂಗಳೂರು ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಸಹಿತ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಸೀದಿ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ಪನಾಮಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




