March 19, 2026

ಕಡಬ: ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನ: ರೈಲ್ವೆ ಹಳಿಯಲ್ಲಿ ಬೆನ್ನಟ್ಟಿ ಪೆಟ್ರೋಲ್ ಸುರಿದು ಕೃತ್ಯ

0
first-information-report

ಕಡಬ: ರೈಲ್ವೇ ಹಳಿಯಲ್ಲಿ ಅಣ್ಣನನ್ನು ತಮ್ಮನೇ ಬೆನ್ನಟ್ಟಿ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಘಟನೆ ಕೋಡಿಂಬಾಳದ ಬಳಿ ನಡೆದಿದ್ದು, ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಂಭೀರ ಸುಟ್ಟ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಾದ ಯುವಕನ್ನು ಹನುಮಪ್ಪ (45) ಎಂದು ಗುರುತಿಸಲಾಗಿದೆ.

ಗದಗ ಮೂಲದ ಅಣ್ಣ ತಮ್ಮಂದಿರು ಪುತ್ತೂರಿನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಜೂ.8ರ ಮಧ್ಯಾಹ್ನದ ಮಂಗಳೂರು- ಬೆಂಗಳೂರು ರೈಲು ಮಾರ್ಗದಲ್ಲಿ ಸಂಚರಿಸುವ ಪ್ಯಾಸೆಂಜ‌ರ್ ರೈಲಿನಲ್ಲಿ ಬಂದು ಬಜಕರೆ ರೈಲು ನಿಲ್ದಾಣದಲ್ಲಿ ಇಬ್ಬರು ಇಳಿದಿದ್ದರು.

ರೈಲು ಹೋದ ಬಳಿಕ ಹನುಮಪ್ಪ ನನ್ನು ಸುಮಾರು 500ಮೀ ಮುಂದಕ್ಕೆ ಕರೆದುಕೊಂಡು ಬಂದು ತಮ್ಮ ನಿಂಗಪ್ಪ ಎಂಬಾತ ಏಕಾಎಕಿ ತನ್ನ ಕೈಯಲ್ಲಿದ್ದ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿರುವುದಾಗಿ ತಿಳಿದು ಬಂದಿದೆ.

ಕಿರುಚಾಟ ಕೇಳಿ ಬಂದ ಹಿನ್ನಲೆ ಸ್ಥಳೀಯರು ಗಮನಿಸಿದಾಗ ವ್ಯಕ್ತಿ ಗಂಭೀರ ಸ್ಥಿತಿಯಲ್ಲಿರುವುದು ಕಂಡು ಬಂದಿದೆ. ಕೂಡಲೇ ಗಾಯಾಳುವನ್ನು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಗಾಗಿ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲು ತಯಾರಿ ನಡೆಯುತ್ತಿದೆ.

ಘಟನಾ ಸ್ಥಳಕ್ಕೆ ತೆರಳಿದ ಕಡಬ ಪೊಲೀಸರು ಬೆಂಕಿ ಹಚ್ಚಿರುವ ಲಿಂಗಪ್ಪ ಎಂಬಾತನ್ನು ವಶಕ್ಕೆ ಪಡೆದಿದ್ದಾರೆ.

ರೈಲೇ ಹಳಿಯಲ್ಲಿ ಈ ಘಟನೆ ನಡೆದಿರುವುದರಿಂದ ರೈಲ್ವೇ ಇಲಾಖೆಗೆ ಹಸ್ತಾಂತರ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!