ಮಂಗಳೂರು: ಭರತ್ ಕುಮ್ದೇಲ್ ಮೇಲೆ ಬಂಧನ ಸಹಿತ ಯಾವುದೇ ಒತ್ತಡ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಆದೇಶ
ಮಂಗಳೂರು: ಬಂಧನ ಭೀತಿಯಲ್ಲಿದ್ದ ಭರತ್ ಕುಮ್ಡೇಲ್‌ಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ
ಪುತ್ತೂರಿನಲ್ಲಿ ನಡೆದ ಸುಹಾಸ್ ಶೆಟ್ಟಿಗೆ ನುಡಿನಮನ ಸಭೆಯಲ್ಲಿ ಕೋಮುದ್ವೇಷವನ್ನು ಉಂಟುಮಾಡುವಂತಹ ಭಾಷಣ ಮಾಡಿದ ಆರೋಪದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ ಕ್ರ 35/2025 ಕಲಂ-196,353(2) BNS 2023 ರಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶ ಮಾಡಿದೆ.
ಭರತ್ ಪರ ವಾದ ಮಂಡಿಸಿದ ಹೈಕೋರ್ಟ್ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ವಾದ ಆಲಿಸಿದ, ಕೃಷ್ಣಕುಮಾರ್ ಅವರಿದ್ದ ನ್ಯಾಯಪೀಠ, ಮುಂದಿನ ವಿಚಾರಣೆಯವರಿಗೆ ಪೋಲಿಸ್ ಇಲಾಖೆ ಬಂಧನ ಸಹಿತ ಯಾವುದೇ ಒತ್ತಡ, ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶಿಸಿದೆ. ಅಲ್ಲದೆ, ವಿಚಾರಣೆಗೆ ಸಹಕಾರಿಸಲು ಸೂಚಿಸಿದೆ.




