March 13, 2026

ಬಂಟ್ವಾಳ: ಹಾವು ಕಡಿದು ವಿವಾಹಿತ ಮೃತ್ಯು

0
image_editor_output_image342136668-1748968655549

ಬಂಟ್ವಾಳ: ಹಾವು ಕಡಿದು ನವ ವಿವಾಹಿತ ಮೃತಪಟ್ಟ ಘಟನೆ ಇಂದು ಸಂಜೆ ಪಾಂಡವರಕಲ್ಲು ಎಂಬಲ್ಲಿ ಸಂಭವಿಸಿದೆ.
ಮೃತಪಟ್ಟ ನವವಿವಾಹಿತನನ್ನು ಅಶ್ರಫ್ ಪಾದೆ(29) ಎಂದು ಗುರುತಿಸಲಾಗಿದೆ.

ಅಡಿಕೆ ಸುಳಿಯುವ ಕೆಲಸಕ್ಕೆoದು ಹೋದಾಗ ಗೋಣಿಯ ಬದಿಯಲ್ಲಿದ್ದ ನಾಗರ ಹಾವು ಅಶ್ರಫ್ ರವರಿಗೆ ಕಚ್ಚಿದ್ದು ತಕ್ಷಣವೇ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ.
ಅಶ್ರಫ್ ರವರು ಆರು ತಿಂಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಹೆಚ್ಚಿನ ವಿವರಗಳು ಬರಬೇಕಿದೆ.

Leave a Reply

Your email address will not be published. Required fields are marked *

error: Content is protected !!