ಉಮೀದ್: ಲಯನ್ಸ್ ಜಿಲ್ಲೆ 317D ಪ್ರಾಂತ್ಯ ಅಧ್ಯಕ್ಷರ, ವಲಯ ಅಧ್ಯಕ್ಷರ ತರಬೇತಿ ಶಿಬಿರ
“ಉಮೀದ್” – ಲಯನ್ಸ್ ಜಿಲ್ಲೆ 317 ಡಿ ಇದರ ಪ್ರಾಂತ್ಯ ಅಧ್ಯಕ್ಷರ ವಲಯ ಅಧ್ಯಕ್ಷರ ತರಬೇತಿ ಶಿಬಿರವು ಇತ್ತೀಚೆಗೆ ಮಂಗಳೂರಿನಲ್ಲಿ ನಡೆಯಿತು.
ಜಿಲ್ಲಾ ಗವರ್ನರ್ ಲಯನ್ ಬಿ.ಎಂ ಭಾರತಿಯವರು ಉದ್ಘಾಟಿಸಿದರು.ನಿಯೋಜಿತ ಜಿಲ್ಲಾ ಗವರ್ನರ್ ಕುಡುಪಿ ಅರವಿಂದ ಶೆಣೈಯವರು ತರಬೇತಿಯ ಉದ್ದೇಶ ಮತ್ತು ಕರ್ತವ್ಯದ ಬಗ್ಗೆ ಮಾಹಿತಿ ನೀಡಿದರು. ಪ್ರಥಮ ಉಪ ರಾಜ್ಯಪಾಲ ತಾರನಾಥ್ ಕೊಪ್ಪ, ಮಾಜಿ ಗವರ್ನರ್ ಕಿಶೋರ್ ರಾವ್ ಮತ್ತು ಡಿಜಿ ಕ್ವಾಡಿನೇಟರ್ ಜೋತಿ ಶೆಟ್ಟಿ,ಕೋಶಾಧಿಕಾರಿ ಬಾಲಕೃಷ್ಣ ಹೆಗ್ಡೆ, ಕ್ಯಾಬಿನೆಟ್ ಕ್ವಾಡಿನೇಟರ್ ನ್ಯಾನ್ಸಿ ಮಸ್ಕರೇನಿಯಸ್ ಮತ್ತು ಇನ್ನಿತರ ಲಯನ್ಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ನಾಯಕತ್ವ ವಿಭಾಗದ ಅಧ್ಯಕ್ಷೆ ಉಮಾ ಹೆಗ್ಡೆ ಸ್ವಾಗತಿಸಿದರು.ಸಂಪುಟ ಕಾರ್ಯದರ್ಶಿ ಚಂದ್ರೆ ಗೌಡ ವಂದಿಸಿದರು.
ಚಿಕ್ಕಮಗಳೂರು ,ಹಾಸನ,ಕೊಡಗು ದಕ್ಷಿಣ ಕನ್ನಡ ದ ಪ್ರಾಂತ್ಯ ಅಧ್ಯಕ್ಷ ರು ಮತ್ತು ವಲಯ ಅಧ್ಯಕ್ಷರುಜನ ಭಾಗವಹಿಸಿದರು ಎಂದು ನಿಯೋಜಿತ ಜಿಲ್ಲಾ ಸಂಪರ್ಕ ಅಧಿಕಾರಿ ಲಯನ್ಸ್ ಸುದರ್ಶನ್ ಪಡಿಯಾರ್ ವಿಟ್ಲ ತಿಳಿಸಿದರು.






