March 12, 2026

ಕೊಳ್ನಾಡು ಗ್ರಾ.ಪಂ ಉಪಾಧ್ಯಕ್ಷೆ ಕಾಂಗ್ರೆಸ್ ಪಕ್ಷದ ಹುದ್ದೆ ರಾಜೀನಾಮೆ: ತಕ್ಷಣವೇ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಬದಲಾಯಿಸಲು ಆಗ್ರಹಿದ ಅಸ್ಮಹಸೈನಾರ್

0
image_editor_output_image-920322437-1748596494746

ವಿಟ್ಲ: ಕುರಿಯಾಳ ಸಮೀಪದ ಕಾಂಬೋಡಿಯ ಇರಾಕೋಡಿ ಎಂಬಲ್ಲಿ  ಮರಳು ಅನ್ ಲೋಡ್ ಮಾಡುತ್ತಿದ್ದ ವೇಳದ
ಕೊಳತ್ತಮಜಲು ನಿವಾಸಿ ಅಮಾಯಕ ಅಬ್ದುಲ್ ರಹಿಮಾನ್  ಎಂಬವರ ಕೊಲೆ ಮತ್ತು ಅನಂತರ ನಡೆದ ಅಹಿತಕರ ಘಟನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಮತ್ತು ಗೃಹ ಸಚಿವರ ಮತ್ತು ಗುಪ್ತಚರ ಇಲಾಖೆಯ ಬೇಜವಾಬ್ದಾರಿ ಮತ್ತು ವೈಫಲ್ಯ ಕಾರಣವಾಗಿದ್ದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಬೇಕು
ಎಂದು ಕೊಳ್ನಾಡು ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಆಸ್ಮಾ ಹಸೈನಾರ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಳತ್ತಮಜಲಿನ ಘಟನೆ ಮತ್ತು ಅನಂತರ ನಡೆದ ಬೆಳವಣಿಗೆಗಳು ಬೇಸರ ಉಂಟು ಮಾಡಿವೆ. ಪಕ್ಷದ ಸಕ್ರಿಯ ಕಾರ್ಯಕರ್ತೆಯಾಗಿರುವ ತಾನು
ಪಕ್ಷದ ಸ್ಥಳೀಯರ ಹಿರಿಯರ ನಡೆಯಂತೆ  ಎಂದು ಪಕ್ಷದ ಚಟುವಟಿಕೆಗಳಿಂದ ತಟಸ್ಥಳಾಗಿ ಉಳಿಯುವುದಾಗಿ ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.‌ ಹರಿಪ್ರಸಾದ್, ಮಂಜುನಾಥ ಭಂಡಾರಿ ಅಥವಾ ರಮಾನಾಥ ರೈ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಉಸ್ತುವಾರಿ ಸಚಿವರನ್ನಾಗಿ ಮಾಡಲಿ ಎಂದರು
ಕೊಳತ್ತಮಜಲು ಘಟನೆಗೆ ಸಂಬಂಧಿಸಿದಂತೆ ಶಾಸಕರ ಹೇಳಿಕೆ ಖಂಡನಾರ್ಹ ಎಂದ ಅವರು
ಕೊಳ್ನಾಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮತೀಯ ಸೌಹಾರ್ದಕ್ಕೆ ಧಕ್ಕೆಯಾಗಿಲ್ಲ. ಹಿಂದೂ ಮುಸ್ಲಿಂ ಭೇದವಿಲ್ಲದೆ ಪರಸ್ಪರ ಸಹಕರಿಸಿಕೊಂಡು ಅನ್ಯೋನ್ಯವಾಗಿ ಬಾಳುತ್ತಿದ್ದೇವೆ ಎಂದರು.ಕೋಮು ದ್ವೇಷ ಹರಡುವ ಭ಼ಾಷಣಗಳನ್ನು ಮತ್ತು
ಬಾಡಿಗೆ ಭಾಷಣಗಾರರನ್ನು ತಡೆಯುವ‌ ಅಗತ್ಯ ಇದೆ ಎಂದು ಅವರು ಹೇಳಿದರು‌

Leave a Reply

Your email address will not be published. Required fields are marked *

error: Content is protected !!