March 12, 2026

ಬಂಟ್ವಾಳ: ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಸಿರಾಜ್ ಮದಕ ರಾಜೀನಾಮೆಗೆ ತೀರ್ಮಾನ

0
image_editor_output_image101942385-1748449645394

ಬಂಟ್ವಾಳ: ತಾಲೂಕಿನ ಕೊಳ್ತಮಜಲು ಎಂಬಲ್ಲಿ ನಡೆದ ಯುವಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಕಾಂಗ್ರೆಸ್ ಸರಕಾರದ ನೀತಿಯನ್ನು ಖಂಡಿಸಿ ಬಂಟ್ವಾಳ ತಾಲೂಕು ಗ್ಯಾರಂಟಿ ಯೋಜನೆಯ  ಅನುಷ್ಠಾನ ಸಮಿತಿ ಸದಸ್ಯ ಸಿರಾಜ್ ಮದಕ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಬಂಟ್ವಾಳ ತಾಲೂಕು ಕೊಳತ್ತಮಜಲಿನಲ್ಲಿ ನಿನ್ನೆ ನಡೆದಿರುವ ಅಮಾಯಕ ಅಬ್ದುಲ್‌ ರಹಿಮಾನ್ ಅವರ ಬರ್ಬರ ಹತ್ಯೆ, ಮಂಗಳೂರು ಕುಡುಪು ಎಂಬಲ್ಲಿ ನಡೆದ ಅಶ್ರಫ್‌ ಎಂಬವರ ಗುಂಪು ಹತ್ಯೆ ಸಹಿತ ಜಿಲ್ಲೆಯಲ್ಲಿ ನಡೆಯುವ ಧರ್ಮ ಧ್ವೇಷ ಭಾಷಣ, ಪ್ರತಿಕಾರದ ಭಾಷಣಗಳಿಂದ ಉಂಟಾಗಿರುವ ಅರಾಜಕತೆ ಸ್ಥಿತಿಯನ್ನು ನಿಭಾಯಿಸಲು ಸಂಪೂರ್ಣ ವಿಫಲವಾದ ರಾಜ್ಯದ ಗೃಹ ಸಚಿವರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ ಧೋರಣೆ ಖಂಡಿಸಿ ಬಂಟ್ವಾಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುತ್ತಿದ್ದೇನೆ.

ಕಳೆದ ಕೆಲ ದಿನಗಳಿಂದ ದ.ಕ ಜಿಲ್ಲೆಯಲ್ಲಿ ನಿರಂತರವಾಗಿ ಕೋಮುದ್ವೇಷ ಭಾಷಣ ಮಾಡುತ್ತಿರುವ ಶರಣ್‌ ಪಂಪ್ವೆಲ್‌, ಶ್ರೀಕಾಂತ್‌ ಶೆಟ್ಟಿ, ಭರತ್‌ ಕುಮ್ಡೇಲ್‌, ನರಸಿಂಹ ಮಾಣಿ ಸಹಿತವಿರುವ ಸಂಘ ಪರಿವಾರದ ನಾಯಕರನ್ನು ಬಂಧಿಸಲು ಸರಕಾರ ಹಾಗೂ ಪೊಲೀಸ್‌ ಇಲಾಖೆ ಸಂಪೂರ್ಣ ವಿಫಲವಾಗಿದ್ದು ಇದರ ಪರಿಣಾಮ ಜಿಲ್ಲೆಯಲ್ಲಿ ಅಹಿತಕರ ಘಟನೆಗಳು ಪುನರಾವರ್ತಿತವಾಗುತ್ತಿದೆ, ಅಮಾಯಕ ಯುವಕರ ಹತ್ಯೆ, ಹಲ್ಲೆ ಘಟನೆಗಳನ್ನು ನಿಭಾಯಿಸಲು ಹಾಗೂ ಜಿಲ್ಲೆಯಲ್ಲಿ ಶಾಂತಿ ಸ್ಥಾಪನೆ ಮಾಡಲು ವಿಫಲವಾದ ಪೊಲೀಸ್‌ ಇಲಾಖೆ ಮತ್ತು ಸರಕಾರದ ನಡೆ ಮನಸಿಗೆ ಬೇಸರ ಉಂಟಾಗಿದ್ದು ಈ ಹಿನ್ನೆಲೆಯಲ್ಲಿ ಸರಕಾರದಿಂದ ನಾಮ ನಿರ್ದೇಶನಗೊಂಡ ನನ್ನ ಹುದ್ದೆಗೆ ರಾಜಿನಾಮೆ ನೀಡುತ್ತಿದ್ದೇನೆ.

ಅಮಾಯಕ ಯುವಕನಾದ ಅಬ್ದುಲ್‌ ರಹಿಮಾನ್‌ ಅವರ ಹತ್ಯೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಎಸ್.ಐ.ಟಿ ತನಿಖೆಗೆ ವಹಿಸಬೇಕು. ಮೃತ  ಅಬ್ದುಲ್‌ ರಹಿಮಾನ್‌ ಅವರ ಕುಟುಂಬಕ್ಕೆ ಕನಿಷ್ಟ 1 ಕೋಟಿ ಪರಿಹಾರ ನೀಡಬೇಕೆಂದು ಈ ಮೂಲಕ ಸರಕಾರವನ್ನು‌ ಒತ್ತಾಯಿಸುತ್ತಿದ್ದೇನೆ

Leave a Reply

Your email address will not be published. Required fields are marked *

error: Content is protected !!