ಬಂಟ್ವಾಳ: ಟಾಫಿಕ್ ಜಾಮ್ ಸಂಭವಿಸುವ ಸ್ಥಳದಲ್ಲಿ ನಿಂತು ಪೊಲೀಸರಿಂದ ದಂಡ ವಸೂಲಿ: ಫೋಟೋ ವೈರಲ್
ಬಂಟ್ವಾಳ ಟ್ರಾಫಿಕ್ ಪೋಲೀಸರ ದಂಡ ವಸೂಲಿ ಮಾಡುವ ಜಾಗದ ಬಗ್ಗೆ ಸಾರ್ವಜನಿಕರು ಪೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದ ಮೂಲಕ ವೈರಲ್ ಮಾಡಿದ್ದಾರೆ. ಇದು ಸಖತ್ ವೈರಲ್ ಆಗಿದ್ದು , ಸಾಕಷ್ಟು ಕಮೆಂಟ್ ಗಳಿಗೆ ಕಾರಣವಾಗಿದ್ದಲ್ಲದೆ,ಚರ್ಚೆಗಳಿಗೆ ಅವಕಾಶ ಮಾಡಿಕೊಟ್ಟಿದೆ. ಸಂಸದ ಮತ್ತು ಶಾಸಕರಿಗೂ ಮೆಸೇಜ್ ಟ್ಯಾಗ್ ಮಾಡಲಾಗಿದ್ದು, ಒಂದಷ್ಟು ಸದ್ದು ಮಾಡುತ್ತಿದೆ
ಈ ಜಡಿ ಬೊಲ್ಲ ಬರ್ಸಕ್ಕೆ ಕಲ್ಲಡ್ಕದ ನೂತನ ಫ್ಲೈ ಓವರ್ ಅಡಿಯ ಕೆಸರಿನ ರಸ್ತೆಯಲ್ಲಿ ಮೂರು ಮೂರು ಕಡೆ ನಿಂತು ಟ್ರಾಫಿಕ್ ಪೊಲೀಸರು ಕಷ್ಟಪಟ್ಟು ವಾಹನಗಳನ್ನು ನಿಲ್ಲಿಸಿ ಫೈನ್ ಹಾಕೋದು ನೋಡಿದ್ರೆ ಸರ್ವಿಸ್ ರಸ್ತೆ ವೇಗವಾಗಿ ನಿರ್ಮಾಣ ಮಾಡಲು ಇವ್ರೆ ಹಣ ಸಂಗ್ರಹ ಮಾಡಿ KNR ಕಂಪನಿಗೆ ಕೊಡ್ತಾ ಇದ್ದಾರೆನೋ ಅಂತ ಅನಿಸ್ತಿದೆ ಅಥವಾ ನೂತನ ಫ್ಲೈ ಓವರ್ ತೆರೆದಾಗ ಜನರಿಗೆ ಸಿಂಹಿ ತಿಂಡಿ ಚಾಕ್ಲೆಟ್ ಹಂಚಲು ಹಣ ಸಂಗ್ರಹ ಮಾಡ್ತಾ ಇದ್ದಾರೆನೋ ಅಂತ!!
ನೋಡಿ ಟ್ರಾಫಿಕ್ ಪೊಲೀಸರೇ ನೀವು ವಾಹನ ನಿಲ್ಲಿಸಿ ದಂಡ ಹಾಕೋದು, ವಾಹನ ಸೀಜ್ ಮಾಡೋ ನಿಮ್ಮ ಕೆಲಸದ ವಿಚಾರದಲ್ಲಿ ನಮ್ಮದೇನೂ ಅಭ್ಯಂತರವಿಲ್ಲ. ಆ ಕುರಿತು ನೀವು ಮಾಡ್ತಾ ಇರೋ ಕೆಲಸ ಸರಿಯಾದದ್ದೇ. ಇಂತಿಷ್ಟು ದಿನದಲ್ಲಿ ಇಂತಿಷ್ಟು ಹಣ ಸಂಗ್ರಹ ಮಾಡಿಕೊಡಲು ನಿಮಿಗೆ ಸರ್ಕಾರ ಟಾರ್ಗೆಟ್ ಕೊಟ್ಟಿದೆ ಅನ್ನೋದು ಬಹುತೇಕ ಎಲ್ಲಾ ಜನಸಾಮಾನ್ಯರಿಗೂ ಗೊತ್ತಿದೆ. ಪೊಲೀಸರೇ ನಿಮ್ಮ ಸಮಸ್ಯೆಯ ಬಗ್ಗೆ ಜನರಿಗೆ ಅರಿವಿದೆ. ಆದರೆ ನೀವು ವಾಹನ ತಪಾಸಣೆ ಮಾಡಲು ಆಯ್ಕೆ ಮಾಡಿಕೊಂಡಿರುವ ಜಾಗದ ಬಗ್ಗೆ ನಮ್ಮ ಪ್ರಶ್ನೆಗಳಿಗೆ ತಕರಾರಿದೆ. ಒಂದು ಕಡೆ ಫ್ಲೈ ಓವರ್ ಕಾಮಗಾರಿ ನಡೀತಾ ಇದೆ, ಪಿಲ್ಲರ್ ಗಳ ನಡುವೆ ಕ್ರೇನ್ಗಳು, JCB ಗಳು ಕೆಲ್ಸಾ ಮಾಡ್ತಾ ಇರುತ್ತವೆ. ಇನ್ನೊಂದು ಕಡೆ ಸರ್ವಿಸ್ ರಸ್ತೆ ನಿರ್ಮಾಣ ಅರ್ಧಕ್ಕೆ ನಿಂತಿದೆ. ಜನರಿಗೆ ಆ ಕೆಸರಿನ ರಸ್ತೆಯಲ್ಲಿ ಹೋಗೋದು ಒಂದು ದೊಡ್ಡ ಸಾಹಸ ಅನ್ನೋ ಹಾಗೆ ಆಗಿದೆ. ದ್ವಿಚಕ್ರ ವಾಹನ ಸವಾರರ ಬಗ್ಗೆ ಹೇಳೋದೇ ಬೇಡ. ಅಲ್ಲಿಂದ ಕಾರುಗಳು ಒಮ್ಮೆ ಹೋದ್ರೆ ಸಾಕು ಗದ್ದೆಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಬಿದ್ದುಕೊಂಡಿದ್ದ ಎಮ್ಮೆಯ ರೀತಿ ಆ ಕಾರುಗಳು ಕೆಸರು ಮೆತ್ತಿಕೊಳ್ಳುತ್ತದೆ. ಸ್ಲೋ ಮೂವಿಂಗ್ ಟ್ರಾಫಿಕ್ ಬೇರೆ ಇದೆ, ಸಮುದ್ರ ಹೋಟೆಲ್ ಜಾಗದಿಂದ ಮೇಲ್ಕಾರ್ ವರೆಗೆ 3km ಹೋಗಲು ಕಡಿಮೆ ಅಂದ್ರೂ 30 ನಿಮಿಷ ಬೇಕು.
ಈ ರೀತಿ ಸಮಸ್ಯೆಗಳ ಮೇಲೆ ಸಮಸ್ಯೆಗಳೇ ತುಂಬಿರುವ ಆ ರಸ್ತೆಯಲ್ಲಿ ವಾಹನ ನಿಲ್ಲಿಸಿ ದಂಡ ವಸೂಲಾತಿ ಯಾಕಾಗಿ? ಬೇಸಿಗೆಯಲ್ಲಿ ದೂಳಿನಿಂದ ಹಿಡಿದು ಈಗಿನ ಕೆಸರಿನ ವರೆಗೆ ಕಮ್ಮಿ ಅಂದ್ರೂ ಆರೇಳು ತಿಂಗಳು ಆಯ್ತು ನೀವು ಅಲ್ಲಿ ವಸೂಲಿಗೆ ಇಳಿದು . ಅಲ್ಲಿ ಮೊದಲೇ ಟ್ರಾಫಿಕ್ ಸಮಸ್ಯೆ ಇದೆ, ನೀವು ಟ್ರಾಫಿಕ್ ಪೊಲೀಸರು ವಾಹನ ನಿಲ್ಲಿಸಿ ಮತ್ತೆ ಟ್ರಾಫಿಕ್ ಸಮಸ್ಯೆ ಮಾಡಿದ್ರೆ ಜನರ ಯಾರನ್ನು ಕೇಳೋದು? ಮಾಣಿಯಿಂದ ಮೊದಲು ಅಥವಾ ಮಾಣಿಯ ಬಳಿಕ ಐದಾರು ಕಿಲೋಮೀಟರ್ ರಸ್ತೆ, ಪಾಣೆಮಂಗಳೂರು ಹತ್ರ ರಸ್ತೆ ತುಂಬಾ ಚೆನ್ನಾಗಿದೆ ಅಲ್ಲಿ ನಿಂತು ವಾಹನ ತಪಾಸಣೆ ಮಾಡಲು ಏನು ಸಮಸ್ಯೆ ಇದೆ? ಕಲ್ಲಡ್ಕವೆ ಯಾಕೆ? ಬಿಸಿರೋಡಿನಿಂದ ಕೈಕಂಬ ಎಂಬಪ್ರದೇಶವಿದೆ ಅಲ್ಲಿ ಕಾನೂನು ಬಾಹಿರವಾಗಿ ಸಂಚಾರ ಮಾಡುವ ವಾಹನಗಳ ಸಂಖ್ಯೆ ಸಾಲುಸಾಲು ಇದ್ದರೂ ಟ್ರಾಫಿಕ್ ಪೋಲೀಸರೇಕೆ ಕಣ್ಣಿಗೆ ಬಟ್ಟೆ ಕಟ್ಟಿದ್ದೀರಿ? ಕಲ್ಲಡ್ಕದ ಎರಡು ಬದಿಯಲ್ಲಿ ನಿಂತು ಕಾಯುವ ನಿಮ್ಮ ಒಬ್ಬ ಸಿಬ್ಬಂದಿ ಕೈಕಂಬದಲ್ಲಿ ಫೈನ್ ಹಾಕುವ ತಾಕತ್ತು ತೋರಿಸಲಿ!!.ಅದೇಕೆ ನಿಮಗೆ ವರ್ಷದ 360 ದಿವಸಾನೂ ಕಲ್ಲಡ್ಕನೇ ಬೇಕು? ಕಲ್ಲಡ್ಕದ ಕೆಸರು ಅಂದ್ರೆ ಅಷ್ಟು ಇಷ್ಟನಾ? ಅಥವಾ ಜನರಿಗೆ ಕಷ್ಟ ಕೊಡೋದ್ರಲ್ಲಿ ಏನಾದ್ರು ಖುಷಿ ಸಿಗೊತ್ತಾ? ಫ್ಲೈ ಓವರ್ ಆಗೋ ತನಕ ಅದರಡಿಯಲ್ಲೇ ದಂಡ ವಸೂಲಿ ಮಾಡ್ತೀವಿ ಅಂತ ಹರಕೆ ಏನಾದ್ರು ಹೊಟ್ಟುಕೊಂಡಿದ್ದೀರಾ ಹೇಗೆ?
ಜನರಿಗೆ ಇಲ್ಲಿ ಆಗ್ತಾ ಇರೋ ಈ ಸಮಸ್ಯೆಯನ್ನು ಜನಪ್ರತಿನಿಧಿಗಳು ಆದಷ್ಟು ಬಗೆಹರಿಸಬೇಕು ಅನ್ನೋದು ಕಲ್ಲಡ್ಕ ಮೂಲಕ ಸಂಚರಿಸುವ ಎಲ್ಲ ವಾಹನ ಸವಾರ, ಚಾಲಕರ ವಿನಂತಿ..





