December 15, 2025

ತಂದೆಯನ್ನು ಕೊಲೆ ಮಾಡಲು 5 ಲಕ್ಷ ರೂ. ಸುಪಾರಿ ನೀಡಿದ ಚೈತ್ರ? ಪೊಲೀಸ್ ಠಾಣೆ ಮೆಟ್ಟಿಲೇರಿದ ಬಾಲಕೃಷ್ಣ ನಾಯಕ್

0
image_editor_output_image-325161733-1747983563307

ಚೈತ್ರಾ ಕುಂದಾಪುರ ಹಾಗೂ ಅವರ ತಂದೆ ಬಾಲಕೃಷ್ಣ ನಾಯಕ್ ನಡುವಿನ ಜಗಳ ಬೀದಿಗೆ ಬಂದಿದೆ. ಇಬ್ಬರೂ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುತ್ತಾ ಇದ್ದಾರೆ. ಈಗ ತಂದೆಯೇ ಮಗಳ ವಿರುದ್ಧ ಕೊಲೆ ಕೊಲೆ ಬೆದರಿಕೆ ಆರೋಪ ಮಾಡಿದ್ದಾರೆ.

ಇದೀಗ ಮಗಳು ಚೈತ್ರಾ ಕುಂದಾಪುರ, ಪತ್ನಿ ರೋಹಿಣಿ ವಿರುದ್ಧ ಬಾಲಕೃಷ್ಣ ನಾಯಕ್‌ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ‘’ಆಸ್ತಿಗಾಗಿ ಚೈತ್ರಾ ಕುಂದಾಪುರ ಬೆದರಿಕೆ ಹಾಕಿದ್ದಾಳೆ. ಆಕೆಗೆ ಭೂಗತ ದೊರೆಗಳ ಸಂಪರ್ಕವಿದ್ದು, ಯಾವುದೇ ಹೇಯ ಕೃತ್ಯ ಮಾಡಲು ಹೇಸುವವಳಲ್ಲ’’ ಎಂದು ಮಗಳ ವಿರುದ್ಧ ತಂದೆ ಬಾಲಕೃಷ್ಣ ನಾಯಕ್‌ ದೂರು ಕೊಟ್ಟಿದ್ದಾರೆ.

ತಂದೆಗೆ ಕೊಲೆ ಬೆದರಿಕೆ ಹಾಕಿದ್ದಾರಂತೆ ಚೈತ್ರಾ ಕುಂದಾಪುರ!
ಮಗಳು ಚೈತ್ರಾ ಕುಂದಾಪುರ ವಿರುದ್ಧ ತಂದೆ ಬಾಲಕೃಷ್ಣ ನಾಯಕ್ ಗಂಭೀರ ಆರೋಪ ಮಾಡಿದ್ದಾರೆ. ಮಗಳು ತಮಗೆ ಕೊಲೆ ಬೆದರಿಕೆ ಹಾಕಿದ್ದಾಳೆ ಎಂದು ದೂರಿನಲ್ಲಿ ಬಾಲಕೃಷ್ಣ ನಾಯಕ್‌ ಉಲ್ಲೇಖಿಸಿದ್ದಾರೆ.

‘’ನನ್ನ ಮಗಳು ಆಕೆಯ ಸ್ನೇಹಿತನಾದ ಶ್ರೀಕಾಂತ್ ಈತನನ್ನು ಮದುವೆಯಾಗಲು ನಿರ್ಧರಿಸಿದ ವಿಷಯ ತಿಳಿಯಿತು. ಆಗ ನಾನು ಅವಳ ಬಳಿ ಆತನನ್ನು ಮದುವೆ ಆಗುವುದು ಸರಿಯಲ್ಲ, ಆತನು ಸರಿಯಿಲ್ಲ ಎಂದು ಹೇಳಿದಾಗ ನನ್ನ ಮಗಳು ಚೈತ್ರ ಹಾಗೂ ನನ್ನ ಹೆಂಡತಿ ರೋಹಿಣಿ ಇವರುಗಳು ಸೇರಿ ನನ್ನ ಬಳಿ ಒಂದು ವೇಳೆ ಆತನನ್ನು ಬಿಟ್ಟು ಬೇರೆ ಹುಡುಗನನ್ನು ಮದುವೆಯಾಗುವುದಾದರೆ ನನಗೆ ರೂ.5,00,000/- ನಗದು ನೀಡಬೇಕೆಂದು ಒತ್ತಡ ಹೇರಿದರು ಹಾಗೂ ಆ ಮದುವೆಗೆ ಒಪ್ಪದೇ ಇದಲ್ಲಿ ನನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾಳೆ. ಅದಕ್ಕೆ ನಾನು ಒಪ್ಪಲಿಲ್ಲ’’ ಎಂದು ದೂರಿನಲ್ಲಿ ಬಾಲಕೃಷ್ಣ ನಾಯಕ್ ಬರೆದಿದ್ದಾರೆ.

‘’ಆಕೆಯ ಮದುವೆಯು ಶ್ರೀಕಾಂತ್‌ನೊಂದಿಗೆ ನಿಶ್ಚಯವಾಗಿ ಮದುವೆಗೆ ನಾನು ಬಾರದೇ ಇದ್ದಲ್ಲಿ ನನ್ನನ್ನು ಹಾಗೂ ನನ್ನ ಹಿರಿಯ ಮಗಳು ಗಾಯತ್ರಿಯನ್ನು ಭೂಗತ ದೊರೆಗಳಿಗೆ ಸುಪಾರಿ ನೀಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾಳೆ’’ ಎಂದು ಚೈತ್ರಾ ಕುಂದಾಪುರ ವಿರುದ್ಧ ತಂದೆ ಬಾಲಕೃಷ್ಣ ನಾಯಕ್‌ ದೂರಿದ್ದಾರೆ.

‘’ಕುಂದಾಪುರದಲ್ಲಿರುವ ನನಗೆ ಸೇರಿದ ಆಸ್ತಿಯನ್ನು ಯಾವ ರೀತಿಯಲ್ಲಿ ತನ್ನ ಹೆಸರಿಗೆ ಮಾಡಿಕೊಳ್ಳಬೇಕೆಂದು ಗೊತ್ತಿದೆ. ಹಾಗೆಯೇ ತನ್ನ ಹೆಸರಿಗೆ ಸದರಿ ಆಸ್ತಿಯನ್ನು ಮಾಡಿಕೊಂಡೇ ಕೊಳ್ಳುತ್ತೇನೆಂದು ಬೆದರಿಕೆ ಹಾಕಿರುತ್ತಾಳೆ. ಆಕೆಗೆ ಭೂಗತ ದೊರೆಗಳ ಸಂಪರ್ಕವಿದ್ದು, ಆಕೆ ಯಾವುದೇ ಹೇಯ ಕೃತ್ಯ ಮಾಡಲು ಹೇಸುವವಳಲ್ಲ. ಆಕೆಯು ಈಗಾಗಲೇ ನಾನು ಮೃತಪಟ್ಟಿರುತ್ತೇನೆಂದು ಸಾರ್ವಜನಿಕವಾಗಿ ಹೇಳುತ್ತಾ ಬಂದಿರುತ್ತಾಳೆ’’ ಎಂದು ಬಾಲಕೃಷ್ಣ ನಾಯಕ್ ದೂರಿದ್ದಾರೆ.

ಚೈತ್ರಾ ಕುಂದಾಪುರ, ಪತಿ ಶ್ರೀಕಾಂತ್‌, ತಾಯಿ ರೋಹಿಣಿ ವಿರುದ್ಧ ತಂದೆ ಬಾಲಕೃಷ್ಣ ನಾಯಕ್‌ ಗಂಭೀರ ಆರೋಪಗಳನ್ನ ಮಾಡಿದ್ದರು. ‘’ಚೈತ್ರಾ ಕುಂದಾಪುರ ಕಳ್ಳಿ.. ಅವಳು ಮದುವೆಯಾಗಿರುವ ಶ್ರೀಕಾಂತ್ ಸಹ ಕಳ್ಳ’’ ಎಂದು ಮಾಧ್ಯಮಗಳ ಮುಂದೆ ಬಾಲಕೃಷ್ಣ ನಾಯಕ್‌ ಬೆಟ್ಟು ಮಾಡಿ ತೋರಿಸಿದ್ದರು. ಇದೀಗ ಮಗಳು ಚೈತ್ರಾ ಕುಂದಾಪುರ, ಪತ್ನಿ ರೋಹಿಣಿ ವಿರುದ್ಧ ಬಾಲಕೃಷ್ಣ ನಾಯಕ್‌ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!