March 12, 2026

ಮಂಗಳೂರು: ಭಾರೀ ಮಳೆಗೆ ಭೂಕುಸಿತ: ವಿಮಾನ ನಿಲ್ಡಾಣದ ಭಾಗದಿಂದ ಹರಿದು ಬರುತ್ತಿರುವ ಮಣ್ಣು ಮಿಶ್ರಿತ ನೀರು

0
n6650393681747736134316ba47a3c5f7e77ef90c914500403187e5200b346d770449be673f547c48e392f4.jpg

ಮಂಗಳೂರು: ನಗರದ ಹೊರವಲಯದಲ್ಲಿ ಬೆಳ್ಳಂಬೆಳಗ್ಗೆ ಸುರಿದ ಮಳೆಗೆ ಭಾರೀ ಅವಾಂತರ ಸೃಷ್ಟಿಯಾಗಿದೆ. ಬಜಪೆ ಸಮೀಪದ ಅದ್ಯಪಾಡಿಯ ಸಂಕೇಶ ಎಂಬಲ್ಲಿ ಮಳೆಗೆ ಭೂಕುಸಿತ ಉಂಟಾಗಿದೆ.

ಮಂಗಳೂರು ವಿಮಾನ ನಿಲ್ಡಾಣದ ಭಾಗದಿಂದ ಮಣ್ಣು ಮಿಶ್ರಿತ ನೀರು ಹರಿದು ಬರುತ್ತಿದ್ದು ಗುಡ್ಡದ ಕೆಳಭಾಗದ ಉಮಾನಾಥ ಸಾಲ್ಯಾನ್ ಎಂಬವರ ಮನೆಗೆ ಹಾನಿಯಾಗಿದೆ. ಮನೆಯ ಮುಂಭಾಗದ ಅಂಗಳದಲ್ಲಿ ಕೆಸರು ನೀರು ತುಂಬಿಕೊಂಡಿದೆ.

ಕಳೆದ ವರ್ಷವೂ ಇದೇ ಅನಾಹುತ ಸಂಭವಿಸಿದ್ದು, ವಿಮಾನ ನಿಲ್ದಾಣದ ಅಧಿಕಾರಿ ನಿರ್ಲಕ್ಷಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ವಿಮಾನ ನಿಲ್ದಾಣ ಅಧಿಕಾರಿಗಳು ಭೇಟಿ, ಮಂಗಳೂರು ತಾಲೂಕು ತಹಸಿಲ್ದಾರ್ ಭೇಟಿ ನೀಡಿ ಪರಿಸೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!