ಕಾರಿನೊಳಗೆ ಕುಳಿತ ನಾಲ್ವರು ಮಕ್ಕಳು ಉಸಿರುಗಟ್ಟಿ ಮೃತ್ಯು: ಮೂರು ಗಂಟೆಗಳ ಕಾಲ ಹುಡುಕಾಡಿದಾಗ ಕಾರಿನೊಳಗೆ ಸಿಕ್ಕಿತು ಮಕ್ಕಳ ಮೃತದೇಹ
ವಿಶಾಖಪಟ್ಟಣಂ: ಆಟವಾಡುತ್ತಾ ಕಾರಿನೊಳಗೆ ಕುಳಿತ ನಾಲ್ವರು ಮಕ್ಕಳು ಕಾರಿನೊಳಗೆ ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ಆಂಧ್ರಪ್ರದೇಶದ ದ್ವಾರಪುಡಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಮೃತರನ್ನು ಉದಯ್(8), ಚಾರುಮತಿ (8), ಚರಿಷ್ಮಾ (6) ಮತ್ತು ಮನಸ್ವಿ (6) ಎನ್ನಲಾಗಿದ್ದು , ಚಾರುಮತಿ ಮತ್ತು ಚರಿಷ್ಮಾ ಸಹೋದರಿಯರಾಗಿದ್ದಾರೆ, ಉಳಿದ ಇಬ್ಬರು ಅವರ ಸ್ನೇಹಿತರಾಗಿದ್ದಾರೆ.
ಏನಿದು ಘಟನೆ:
ಈಗಾಗಲೇ ರಜೆಯ ಖುಷಿಯಲ್ಲಿರುವ ಮಕ್ಕಳು ಬೆಳಿಗ್ಗೆ ತಿಂಡಿ ತಿಂದು ಮನೆ ಬಿಟ್ಟರೆ ಮತ್ತೆ ಮನೆಗೆ ಬರುವುದು ಮಧ್ಯಾಹ್ನದ ಊಟದ ಹೊತ್ತಿಗೆ ಅದೂ ಮೆನೆಯವರು ಕರೆಯಲು ಹೋಗಬೇಕು ಹಾಗೆಯೇ ಆಂಧ್ರಪ್ರದೇಶದ ದ್ವಾರಪುಡಿ ಗ್ರಾಮದ ನಾಲ್ಕು ಮಕ್ಕಳು ಭಾನುವಾರ ಬೆಳಿಗ್ಗೆ ಆಟವಾಡಲು ಮನೆಯಿಂದ ಹೊರ ಬಂದಿದ್ದಾರೆ, ಆಟವಾಡುತ್ತಾ ಗ್ರಾಮದ ಮಹಿಳಾ ಮಂಡಲ ಕಚೇರಿಯ ಬಳಿ ಇರುವ ಕಾರೊಂದನ್ನು ನೋಡಿದ್ದಾರೆ ಕಾರು ನೋಡಿದ ಮಕ್ಕಳು ಅದರ ಬಾಗಿಲು ತೆರೆಯಲು ಹೋಗಿದ್ದಾರೆ ಅದರಂತೆ ಬಾಗಿಲು ಓಪನ್ ಆಗಿದೆ ಇದೇ ಖುಷಿಯಲ್ಲಿ ನಾಲ್ವರು ಮಕ್ಕಳು ಕಾರಿನ ಒಳಗೆ ಕುಳಿತು ಬಾಗಿಲು ಹಾಕಿ ಆಟ ಶುರುಮಾಡಿದ್ದಾರೆ ಆದರೆ ಆಟದ ನಡುವೆ ಕಾರಿನ ಡೋರ್ ಲಾಕ್ ಆಗಿದ್ದು ಮಕ್ಕಳಿಗೆ ಗೊತ್ತೇ ಇಲ್ಲ ಇದಾದ ಕೆಲ ಹೊತ್ತಿನ ಬಳಿಕ ಮಕ್ಕಳು ಉಸಿರಾಟದ ಸಮಸ್ಯೆಗೆ ಒಳಗಾಗಿ ಅಸ್ವಸ್ಥಗೊಂಡಿದ್ದಾರೆ.
ಮೂರುಗಂಟೆಗಳ ಕಾಲ ಹುಡುಕಾಟ:
ಇನ್ನು ಮಕ್ಕಳು ಮನೆಯಿಂದ ಆಡಲು ಹೋದವರು ಮನೆಗೆ ಬರಲಿಲ್ಲ ಎಂದು ಪೋಷಕರು ಹುಡುಕಲು ಶುರು ಮಾಡಿದಾಗ ಮಕ್ಕಳು ಎಲ್ಲೂ ಕಾಣಲಿಲ್ಲ ಇದರಿಂದ ಗಾಬರಿಗೊಂಡ ಪೋಷಕರು ತಮ್ಮ ಪರಿಚಯವರ ಬಳಿ ಮಕ್ಕಳ ಬಗ್ಗೆ ವಿಚಾರಿಸಿದ್ದಾರೆ ಆದರೆ ಎಲ್ಲೂ ಮಾಹಿತಿ ಸಿಗಲಿಲ್ಲ, ಬಳಿಕ ಮಕ್ಕಳು ನಾಪತ್ತೆಯಾಗಿರುವ ವಿಚಾರ ಗ್ರಾಮದ ತುಂಬಾ ಹರಡಿತ್ತು ಈ ವೇಳೆ ಎಚ್ಚೆತ್ತ ಗ್ರಾಮಸ್ಥರು ಮಕ್ಕಳ ಹುಡುಕಾಟಕ್ಕೆ ಮುಂದಾಗಿದ್ದಾರೆ. ನದಿ, ಕಾಡು, ಹೀಗೆ ಎಲ್ಲಾ ಕಡೆ ಹುಡುಕಾಡಿದರೂ ಮಕ್ಕಳು ಮಾತ್ರ ಯಾರ ಕಣ್ಣಿಗೂ ಬೀಳಲಿಲ್ಲ, ಕೊನೆಗೆ ಮಹಿಳಾ ಮಂಡಲದ ಬಳಿ ಇರುವ ಕಾರು ಪರಿಶೀಲಿಸಿದಾಗ ಮಕ್ಕಳು ಕಾರಿನ ಒಳಗೆ ಅಸ್ವಸ್ಥಗೊಂಡಿರುವುದು ಕಂಡು ಬಂದಿದೆ ಕೂಡಲೇ ಕಾರಿನ ಕಿಟಕಿ ಗಾಜು ಒಡೆದು ಮಕಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ ಈ ವೇಳೆ ಪರಿಶೀಲಿಸಿದ ವೈದ್ಯರು ಮಕ್ಕಳು ಮೃತಪಟ್ಟಿರುವುದಾಗಿ ಹೇಳಿದ್ದಾರೆ.
ಮುಗಿಲುಮುಟ್ಟಿದೆ ಪೋಷಕರ ಆಕ್ರಂದನ
ಇತ್ತ ಮಕ್ಕಳು ಮೃತಪಟ್ಟಿರುವ ವಿಚಾರ ತಿಳಿಯುತ್ತಿದ್ದಂತೆ ಇಡೀ ಗ್ರಾಮದಲ್ಲೇ ನೀರವ ಮೌನ ಆವರಿಸಿದೆ ಅಲ್ಲದೆ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
ಕಾರಿನ ಮಾಲೀಕನಿಗಾಗಿ ಹುಡುಕಾಟ:
ಇನ್ನು ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ ಕಾರಿನ ಮಾಲೀಕನ ಹುಡುಕಾಟ ನಡೆಸುತ್ತಿದ್ದಾರೆ.





