March 12, 2026

ಉಳ್ಳಾಲ: ಚಲಿಸುತ್ತಿದ್ದ ವೇಳೆ ಕಳಚಿ ಬಿದ್ದ ಬಸ್ಸಿನ ಟಯರ್

0
image_editor_output_image-1910250656-1747489621921

ಉಳ್ಳಾಲ : ಚಲಿಸುತ್ತಿದ್ದ ಕೆಎಸ್​ಆರ್​ಟಿಸಿ ಬಸ್ಸಿನ ಟಯರ್ ಏಕಾಏಕಿ ಕಳಚಿ ಬಿದ್ದು ಕಂದಕಕ್ಕೆ ವಾಲಿದ ಘಟನೆ ನಡೆದಿದ್ದು, ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ.

ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಕಲ್ಕಟ್ಟ ಎಂಬಲ್ಲಿ ದುರ್ಘಟನೆ ಸಂಭವಿಸಿದ್ದು, ಮಂಗಳೂರಿನಿಂದ ಮುಡಿಪು ಕಡೆ ತೆರಳುತ್ತಿದ್ದ ಕೆಎಸ್​ಆರ್​ಟಿಸಿ ಬಸ್ ನ ಟಯರ್ ಕಳಚಿ ಬಿದ್ದಿದೆ. ಟಯರ್ ಕಳಚುತ್ತಿದ್ದಂತೆಯೇ ನಿಯಂತ್ರಣ ಕಳೆದುಕೊಂಡ ಬಸ್ಸು ಕಂದಕದ ಕಡೆ ವಾಲಿ ನಿಂತಿದೆ.

ಅದೃಷ್ಟವಶಾತ್ ಚಾಲಕ, ನಿರ್ವಾಹಕ ಸೇರಿದಂತೆ ಪ್ರಯಾಣಿಕರೆಲ್ಲರೂ ಜೀವಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!