July 6, 2026

ಹರಿಹರ ಸಮೀಪ ವೃದ್ಧ ಮಹಿಳೆಗೆ ಸ್ಕೂಟಿ ಡಿಕ್ಕಿ:
ಮಹಿಳೆ ಮತ್ತು ಸವಾರನಿಗೆ ಗಾಯ

0
images-76.jpeg

ಸುಳ್ಯ: ಹರಿಹರ ಸಮೀಪ ವೃದ್ಧ ಮಹಿಳೆಯೋರ್ವರಿಗೆ ಸ್ಕೂಟಿ ಡಿಕ್ಕಿಯಾಗಿ ಮಹಿಳೆ ಮತ್ತು ಸ್ಕೂಟಿ ಚಾಲಕ ಗಾಯಗೊಂಡ ಘಟನೆ ಇಂದು ವರದಿಯಾಗಿದೆ.

ಕೊಲ್ಲಮೊಗ್ರ ಕಡೆಯಿಂದ ಬರುತ್ತಿದ್ದ ಸ್ಕೂಟಿ ವಾಹನಕ್ಕೆ ರಸ್ತೆಯಲ್ಲಿ ಏಕಾಏಕಿ ದನಗಳು ಅಡ್ಡ ಬಂದಾಗ ಸವಾರ ಸ್ಕೂಟಿಯನ್ನು ರಸ್ತೆಯ ಪಕ್ಕಕ್ಕೆ ತೆಗೆದಿದ್ದಾರೆ ಎನ್ನಲಾಗಿದೆ. ಅದೇ ಸಂದರ್ಭದಲ್ಲಿ ಹರಿಹರ ಮೂಲದ ಪುಟ್ಟಮ್ಮ ಎಂಬ ವೃದ್ಧ ಮಹಿಳೆ ರಸ್ತೆಬದಿಯಲ್ಲಿ ಬರುತ್ತಿದ್ದು, ಸ್ಕೂಟಿ ಮಹಿಳೆಗೆ ಡಿಕ್ಕಿ ಆಗಿದೆ.

ಈ ಘಟನೆಯಿಂದ ಮಹಿಳೆ ಹಾಗೂ ಸವಾರನಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಯುವ ತೇಜಸ್ ಆಂಬುಲೆನ್ಸ್ ಮೂಲಕ ಗುರುಪ್ರಸಾದ್ ಪಂಜ, ನಿತಿನ್ ಭಟ್ ರವರು ಸುಳ್ಯ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!