March 12, 2026

ಪುತ್ತೂರು: ಕೋಮುದ್ವೇಷ ಭಾಷಣ: ಭರತ್ ಕುಂಮ್ದೇಲು ವಿರುದ್ಧ ಪ್ರಕರಣ ದಾಖಲು

0
image_editor_output_image140563796-1747383840461

ಪುತ್ತೂರು: ಕಾರ್ಯಕ್ರಮಯೊಂದಲ್ಲಿ ಕೋಮು ದ್ವೇಷ ಭಾಷಣ ಮಾಡಿದ ಬಗ್ಗೆ ಭರತ್ ಕುಮ್ದೇಲು ವಿರುದ್ದ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲೂಕು ಪುತ್ತೂರು ಕಸಬಾ ಗ್ರಾಮದ ಬೈಪಾಸ್‌ ರಸ್ತೆಯಲ್ಲಿರುವ ಜೈನಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭರತ್‌ ಕುಮ್ಡೇಲು ಎಂಬಾತನು ಕೋಮುದ್ವೇಷವನ್ನು ಉಂಟುಮಾಡುವಂತಹ ಭಾಷಣವನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಆರೋಪಿಯ ಮಾತುಗಳಿಂದ ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟಾಗುವಂತಹ ಸಾಧ್ಯತೆಗಳಿರುವುದರಿಂದ ಆರೋಪಿತನ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ ಕ್ರ 35/2025 ಕಲಂ-196,353(2) BNS 2023. ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!