ಬೆಳ್ತಂಗಡಿ: ಪತ್ನಿ ತವರು ಮನೆಗೆ ಹೋದ ಸಂದರ್ಭ ಪತಿ ನಾಪತ್ತೆ: ಪತ್ನಿಯಿಂದ ಠಾಣೆಗೆ ದೂರು
ಬೆಳ್ತಂಗಡಿ: ಪತ್ನಿ ತವರು ಮನೆಗೆ ಹೋದ ಸಂದರ್ಭ ಪತಿ ಮನೆ ತೊರೆದು ನಾಪತ್ತೆಯಾದ ಘಟನೆ ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಸುನ್ನತ್ ಕೆರೆ ಎಂಬಲ್ಲಿಂದ ವರದಿಯಾಗಿದೆ.
ಗಂಡ ನಾಪತ್ತೆಯಾಗಿರುವ ಬಗ್ಗೆ ಹೆಂಡತಿ ಕುವೆಟ್ಟು ಗ್ರಾಮದ ಫಾತಿಮಾ ಎಂಬವರು ದೂರನ್ನು ನೀಡಿದ್ದಾರೆ. ಸಂಶುದ್ದೀನ್.ಪಿ.(35) ಎಂಬವರೇ ನಾಪತ್ತೆಯಾದ ವ್ಯಕ್ತಿ.
ಎರಡು ಗಂಡು ಮಕ್ಕಳೊಂದಿಗೆ ಸುನ್ನತ್ ಕೆರೆ ಎಂಬಲ್ಲಿ ವಾಸವಿರುವ ಸಂಶುದ್ದೀನ್ ಪಿ, ಸುಮಾರು ಎರಡು ತಿಂಗಳ ಹಿಂದೆ ಹೆಂಡತಿ ತನ್ನ ತವರು ಮನೆಗೆ ಹೋಗಿದ್ದು ಪ್ರತಿ ದಿನ ಮೊಬೈಲ್ ನಲ್ಲಿ ಮಾತನಾಡಿಕೊಂಡಿದ್ದರು. ದಿನಾಂಕ: 18.12.2021 ರಂದು ಗಂಡನು ಯಾವುದೇ ಕರೆ ಮಾಡದಿದ್ದಾಗ ಫಾತಿಮ ಅವರು ಗಂಡನಿಗೆ ದಿನಾಂಕ: 19.12.2021 ರಂದು 9.00 ಗಂಟೆಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಸಂಶಯಗೊಂಡು ಗಂಡನ ಮನೆಯಾದ ಕುವೆಟ್ಟು ಗ್ರಾಮದ ಸುನ್ನತ್ ಕೆರೆಗೆ ಬಂದಾಗ ಮನೆಗೆ ಬೀಗ ಹಾಕಿರುವುದು ಕಂಡು ಬಂದಿದ್ದು, ಬೀಗ ತೆಗೆದು ಒಳಗೆ ನೋಡಲಾಗಿ ಮನೆಯಲ್ಲಿ ಕೆಲವು ವಸ್ತುಗಳು ಇಲ್ಲದೇ ಇದ್ದು ಸಂಶುದ್ದೀನನು ಮೊಬೈಲ್ ಪೋನ್ ಸ್ವಿಚ್ ಆಫ್ ಮಾಡಿದ್ದು ಇದುವರೆಗೆ ಪೋನ್ ಮಾಡದೇ, ವಾಪಾಸು ಮನೆಗೂ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾನೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.




