KSRTC ಗೆ ಮೂರು ಅಂತರ್ ರಾಷ್ಟ್ರೀಯ ಪ್ರಶಸ್ತಿ
ಮುಂಬೈ: KSRTC ಕೈಗೊಂಡಿರುವ ಅತ್ಯುತ್ತಮ ವಿವಿಧ ಉಪಕ್ರಮಗಳಿಗಾಗಿ 3 ಫಾರ್ಚುನಾ ಉತ್ಕೃಷ್ಟತಾ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ರವಿವಾರ ಕೆಎಸ್ಸಾರ್ಟಿಸಿಯು ಪ್ರಕಟನೆ ಹೊರಡಿಸಿದ್ದು, ಫಾರ್ಚುನಾ ಸಂಸ್ಥೆಯು ನೀಡುವ ಬಿಸಿನೆಸ್ ಲೀಡರ್ ಆಫ್ ದಿ ಇಯರ್, ವಿಜಿನರಿ ಲೀಡರ್ ಶಿಪ್ ಆಫ್ ದಿ ಇಯರ್ ಮತ್ತು ಬ್ರಾಂಡ್ ಸ್ಟ್ರಾಟೆಜಿ ಲೀಡರ್ ಆಫ್ ದಿ ಇಯರ್ ವರ್ಗಗಳಲ್ಲಿ ಪ್ರಶಸ್ತಿಗಳನ್ನು ಕೆಎಸ್ಸಾರ್ಟಿಸಿ ಸಂಸ್ಥೆಗೆ ನೀಡಲಾಗಿದೆ ಎಂದು ತಿಳಿಸಿದೆ.
ಮುಂಬೈನ ಖಾಸಗಿ ಹೋಟೆಲ್‍ನಲ್ಲಿ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ದುಬೈನ ಅಹಮದ್-ಅಲ್-ಹೊಸಾನಿ ಪ್ರಶಸ್ತಿಗಳನ್ನು ಕೆಎಸ್‌ಆರ್‌ಟಿಸಿ ಚಿಕ್ಕಮಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್, ಕೋಲಾರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್ ನಿಗಮದ ಪರವಾಗಿ ಪ್ರಶಸ್ತಿಗಳನ್ನು ಸ್ವೀಕರಿಸಿದರು.





