March 12, 2026

ಬೆಳ್ತಂಗಡಿ: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಯುವಕನ ಮೇಲೆ ಪೋಕ್ಸೋ ಪ್ರಕರಣ ದಾಖಲು

0
1600x960_499550-himachal-pradesh-high-court-questions-on-whether-neutral-approach-to-pocso-act-is-feasible-where-rape-offender-marries-accused-victim.png

ಬೆಳ್ತಂಗಡಿ: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪರಿಣಾಮ ಆಕೆ ಗಭ೯ವತಿಯಾಗಿದ್ದು, ಆರೋಪಿ ಯುವಕನ ವಿರುದ್ಧ ವೇಣೂರು ಪೊಲೀಸರಿಗೆ ನೊಂದ ಬಾಲಕಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಶಿರ್ಲಾಲು ಗ್ರಾಮದ ಸನತ್ (28) ಎಂಬ ಯುವಕನ ಮೇಲೆ ಈ ದೂರನ್ನು ನೀಡಲಾಗಿದೆ.

ಆರೋಪಿ ಸನತ್ ಬಾಲಕಿಯ ತಂದೆಯ ಕಾರಿನಲ್ಲಿ ಚಾಲಕನಾಗಿ ದುಡಿಯುತ್ತಿದ್ದು, ಅಗಾಗ ಮನೆಗೆ ಬಂದವನು ಅಪ್ರಾಪ್ತ ವಯಸ್ಸಿನ ಬಾಲಕಿ ಜೊತೆ ಸಲುಗೆಯಿಂದ ಇದ್ದನೆನ್ನಲಾಗಿದೆ. 2024 ಮೇ 22ರಂದು ಬಾಲಕಿಯ ಜನ್ಮ ದಿನದ ಕಾರ್ಯಕ್ರಮಕ್ಕೆ ಬಂದು ಆರೋಪಿ ರಾತ್ರಿ ಉಳಕೊಂಡಿದ್ದು, ರಾತ್ರಿ ಮಲಗಿದ ಕೋಣೆಗೆ ಹೋಗಿ ಲೈಂಗಿಕ ದೌರ್ಜನ್ಯ ನಡೆಸಿದನೆಂದು ದೂರಿನಲ್ಲಿ ಆರೋಪಿಸಲಾಗಿದೆ.

ತದನಂತರದ ದಿನಗಳಲ್ಲಿ ಕೂಡಾ ಅಗಾಗ ರಾತ್ರಿ ಕಾಲದಲ್ಲಿ ಬಂದು ಲೈಂಗಿಕ ದೌರ್ಜನ್ಯ ಎಸಗಿದ ಪರಿಣಾಮ ಆಕೆ ಗರ್ಭಿಣಿಯಾಗಿದ್ದು, ಇದೀಗ ಆರೋಪಿ ಸನತ್ ‌ವಿರುದ್ದ ಬಾಲಕಿ ವೇಣೂರು ಪೊಲೀಸರಿಗೆ ದೂರು ನೀಡಲಾಗಿದ್ದು, ವೇಣೂರು ಪೊಲೀಸ್ ಠಾಣಾ ಅ.ಕ್ರ: 41/2025 ಕಲಂ: 64 BNS-2023 ಮತ್ತು : 4,6 ಪೋಕ್ಸೋ ಕಾಯಿದೆ-2012ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!