December 16, 2025

ಮಂಗಳೂರು: ವ್ಯಕ್ತಿಯ ಮೃತದೇಹ‌ ಕೊಳೆತ ಸ್ಥಿತಿಯಲ್ಲಿ ಪತ್ತೆ

0
Dead-Body-Death.jpg

ಮಂಗಳೂರು: ಇಲ್ಲಿನ ಕುಲಶೇಖರ ಚರ್ಚ್ ಬಳಿಯ ಅಂಗಡಿಯ ಹಿಂದೆ ಕೊಳೆತ ಶವ ಪತ್ತೆಯಾಗಿದ್ದು, ಮೃತ ವ್ಯಕ್ತಿಯನ್ನು ಶಕ್ತಿನಗರದ ನಿವಾಸಿ ಸುರೇಂದ್ರ (46) ಎಂದು ಗುರುತಿಸಲಾಗಿದೆ.

ಸುರೇಂದ್ರ ಅಪಸ್ಮಾರದಿಂದ ಬಳಲುತ್ತಿದ್ದರು ಮತ್ತು ಆ ಪ್ರದೇಶದಲ್ಲಿ ಕಸ ಸಂಗ್ರಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಅಂಗಡಿಯ ಹಿಂಭಾಗದ ಶೌಚಾಲಯದ ಬಳಿ ಕೊಳೆತ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ.

ಕದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪೊಲೀಸರಿಂದ ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!