ಉಳ್ಳಾಲ ನೇತ್ರಾವತಿ ಸೇತುವೆಯ ದುರಸ್ಥಿ ಕಾರ್ಯ ಪೂರ್ಣ: ಇಂದಿನಿಂದ ಸಂಚಾರಕ್ಕೆ ಮುಕ್ತ
ಮಂಗಳೂರು: ದುರಸ್ಥಿ ಕಾರ್ಯಕ್ಕಾಗಿ ಬಂದ್ ಆಗಿದ್ದ ಉಳ್ಳಾಲ ನೇತ್ರಾವತಿ ಹಳೆ ಸೇತುವೆ ಇಂದಿನಿಂದ ಸಂಚಾರಕ್ಕೆ ಮುಕ್ತವಾಗಿದೆ.
ಉಳ್ಳಾಲದಿಂದ ಮಂಗಳೂರು ಸಂಪರ್ಕಿಸುವ ನೇತ್ರಾವತಿಯಲ್ಲಿ ಎರಡು ಸೇತುವೆಗಳಿದ್ದು, ಒಂದರಲ್ಲಿ ದುರಸ್ತಿ ಕಾರ್ಯ ಇದ್ದುದರಿಂದ ಎಪ್ರಿಲ್ ತಿಂಗಳು ಪೂರ್ತಿಯಾಗಿ ಸಂಚಾರ ಬಂದ್ ಮಾಡಲಾಗಿತ್ತು. ಹೀಗಾಗಿ ಒಂದೇ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ಟ್ರಾಫಿಕ್ ಜಾಮ್ ನೊಂದಿಗೆ ಸಾಗಬೇಕಾಗಿತ್ತು. ಇದರಿಂದಾಗಿ ತುರ್ತಾಗಿ ಸಂಚರಿಸಬೇಕಿದ್ದವರು ತುಂಬಾನೇ ಪ್ರಯಾಸ ಪಟ್ಟಿದ್ದರು.
ಇದೀಗ ದುರಸ್ಥಿ ಕಾರ್ಯ ಸಂಪೂರ್ಣವಾದ ಹಿನ್ನಲೆ ವಾಹನ ಸಂಚಾರಕ್ಕೆ ಇಂದಿನಿಂದ ಅವಕಾಶ ನೀಡಲಾಗಿದೆ.




