ಎಸ್ ಎಸ್ ಎಲ್ ಸಿ ಫಲಿತಾಂಶ: ವಿಟ್ಲ: ವಿಠ್ಠಲ್ ಜೇಸಿಸ್ ಶಾಲೆಗೆ ಸತತ 22 ಬಾರಿ ಶೇ.100 ಫಲಿತಾಂಶ
ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಬಸವನಗುಡಿ ವಿಟ್ಲ
2025ನೆಯ ಸಾಲಿನ ಎಸ್.ಎಸ್. ಎಲ್. ಸಿ ಫಲಿತಾಂಶದಲ್ಲಿ ಈ ಬಾರಿಯೂ ಶೇಕಡ 100 ಪ್ರಥಮ ದರ್ಜೆ ಫಲಿತಾಂಶವನ್ನು ಸಾಧಿಸಿದೆ. 90 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ. ಅಭಿರಾಮ್. ಭಟ್ ಡಿ – 620 ಅಂಕಗಳನ್ನು ಹಾಗೂ ಮಹಿಮಾ ಆರ್. ಕೆ – 617 ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ. ಫಲಿತಾಂಶ ವೈಶಿಷ್ಟಗಳು :- 600 ಕ್ಕಿಂತ ಮೇಲ್ಪಟ್ಟವರು – 13, A+- 42, A- ಶ್ರೇಣಿ- 24, B+ ಶ್ರೇಣಿ -20, B – ಶ್ರೇಣಿ -4.
ನಿರಂತರ 22ನೇ ವರ್ಷದಲ್ಲಿ 10ನೇ ತರಗತಿಯಲ್ಲಿ 100 ಶೇಕಡಾ ಫಲಿತಾಂಶವನ್ನು ದಾಖಲಿಸಿದ ಕೀರ್ತಿ ಸಂಸ್ಥೆಯದ್ದಾಗಿದೆ. ಈ ಸಾಧನೆಯಲ್ಲಿ ಶ್ರಮಿಸಿದ ಎಲ್ಲಾ ಶಿಕ್ಷಕರಿಗೂ ಪೋಷಕರಿಗೂ ಹಾಗೂ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯು ಅಭಿನಂದನೆಗಳನ್ನು ಸಲ್ಲಿಸಿದೆ.


