March 12, 2026

ಮಂಗಳೂರು: ಕಣ್ಣೂರು ಮತ್ತು ಉಳ್ಳಾಲ ದಲ್ಲಿ ಚೂರಿ‌ ಇರಿತ

0
1338311-ullal.webp

ಮಂಗಳೂರು: ನಗರ ಹೊರವಲಯದ ಅಡ್ಯಾರ್ ಕಣ್ಣೂರಿನಲ್ಲಿ ಶುಕ್ರವಾರ ಮುಂಜಾನೆ ನೌಷಾದ್ ಎಂಬಾತನಿಗೆ ಚೂರಿಯಿಂದ ಇರಿದ ಘಟನೆ ವರದಿಯಾಗಿದೆ.

ತೊಕ್ಕೊಟ್ಟು ಸಮೀಪದ ಕಲ್ಲಾಪು ಮಾರ್ಕೆಟ್‌ಗೆ ತೆರಳಲು ಮುಂಜಾನೆ 3 ಗಂಟೆಗೆ ಅಡ್ಯಾರ್ ಕಣ್ಣೂರು ಹೆದ್ದಾರಿಯಲ್ಲಿ ನಿಂತಿದ್ದ ವೇಳೆ ಎರಡು ದ್ವಿಚಕ್ರ ವಾಹನದಲ್ಲಿ ಆಗಮಿಸಿದ ನಾಲ್ವರು ದುಷ್ಕರ್ಮಿಗಳು ನೌಷಾದ್‌ರ ಬೆನ್ನಿಗೆ ಚೂರಿಯಿಂದ ಇರಿದರು ಎನ್ನಲಾಗಿದೆ. ತಕ್ಷಣ ನೌಷಾದ್ ಓಡಿ ತಪ್ಪಿಸಿಕೊಂಡಿದ್ದು, ಬಳಿಕ ಸ್ಥಳೀಯರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಉಳ್ಳಾಲದಲ್ಲಿ ಯುವಕನ ಮೇಲೆ ಚೂರಿ‌ ಇರಿತ:
ಉಳ್ಳಾಲದಲ್ಲೂ ಯುವಕನ ಮೇಲೆ ತಂಡವೊಂದು ತಲವಾರಿನಿಂದ ದಾಳಿ ನಡೆಸಿದ ಪರಿಣಾಮ ಗಾಯಗೊಂಡ ಘಟನೆ ತೊಕ್ಕೊಟ್ಟು ಒಳಪೇಟೆ ಬಳಿ ನಡೆದಿರುವುದು ವರದಿಯಾಗಿದೆ.

ಗಾಯಗೊಂಡವರನ್ನು ಅಳೇಕಲ ನಿವಾಸಿ ಫೈಝಲ್ ಎಂದು ಗುರುತಿಸಲಾಗಿದೆ. ಫೈಝಲ್ ಅವರು ಕಲ್ಲಾಪು ಮಾರುಕಟ್ಟೆ ಗೆ ಬರುತ್ತಿದ್ದ ವೇಳೆ ಒಳಪೇಟೆ ಬಳಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.‌ ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!