March 12, 2026

ಬಜಪೆ: ಫಾಝಿಲ್ ಕೊಲೆ ಆರೋಪಿ ಸುಹಾಸ್ ಮೇಲೆ ತಲವಾರ್ ದಾಳಿ

0
Screenshot_20250501-200640_WhatsAppBusiness.jpg

ಮಂಗಳೂರು: ಬಜಪೆಯಲ್ಲಿ ಯುವಕನೋರ್ವನ ಕೊಲೆ ನಡೆದಿರುವ ಬಗ್ಗೆ ವರದಿಯಾಗಿದೆ. ಆದರೆ, ಈ ಬಗ್ಗೆ ಪೊಲೀಸರು ಇನ್ನಷ್ಟೇ ಅಧಿಕೃತ ಮಾಹಿತಿ ನೀಡಬೇಕಿದೆ.

ಸುಮಾರು 4ರಿಂದ 5 ಮಂದಿ ಇದ್ದ ತಂಡವು ಸಾರ್ವಜನಿಕರ ಎದುರಲ್ಲೇ ತಲವಾರಿನಿಂದ ದಾಳಿ ನಡೆಸಿರುವುದು ಮೊಬೈಲ್‌ನಲ್ಲಿ ಸೆರೆಯಾಗಿರುವುದಾಗಿ ತಿಳಿದುಬಂದಿದೆ.

ಪ್ರಾಥಮಿಕವಾಗಿ ಸಿಕ್ಕಿರುವ ಮಾಹಿತಿಯ ಪ್ರಕಾರ ಕೊಲೆಯಾದ ಯುವಕನನ್ನು ಸುಭಾಷ್ ಶೆಟ್ಟಿ ಎಂದು ತಿಳಿದುಬಂದಿದೆ. ಈತ ಸುರತ್ಕಲ್‌ನ ಮುಸ್ಲಿಂ ಯುವಕ ಮುಹಮ್ಮದ್ ಫಾಝಿಲ್‌ನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!