ಮಂಗಳೂರಿನಲ್ಲಿ ನಡೆದ ಗುಂಪು ಹತ್ಯೆ ಪ್ರಕರಣವನ್ನುಬೇರೆಡೆ ತಿರುಗಿಸುವ ಹೇಳಿಕೆಗಳು ಸರಿಯಲ್ಲ:ವಿಟ್ಲ ಸುನ್ನಿ ಸಯುಕ್ತ ಜಮಾಅತ್
ವಿಟ್ಲ : ಮೊನ್ನೆ ಮಂಗಳೂರಿನಲ್ಲಿ ನಡೆದ ಗುಂಪು ಹತ್ಯೆ ಅತ್ಯಂತ ಖಂಡನೀಯವಾಗಿದ್ದು ಇದನ್ನು ಸರ್ಕಾರದ ಆಡಳಿತದಲ್ಲಿರುವ ಅಧಿಕಾರಿಗಳು ಗೃಹ ಸಚಿವರು ಬೇರೆ ಬೇರೆ ಹೇಳಿಕೆಗಳನ್ನು ನೀಡಿ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಕೆಲಸ ಸರಿಯಲ್ಲ ಅಶ್ರಫ್ ಎಂಬ ಕೇರಳ ಮೂಲದ ಒಬ್ಬ ವ್ಯಕ್ತಿಯನ್ನು 50 ಜನರ ಗುಂಪು ಅತ್ಯ ಮಾಡಿರುವುದು ಮನುಷ್ಯತ್ವಕ್ಕೆ ಮಾಡಿದ ಗೋರ ಅಪರಾಧವಾಗಿದೆ ಇದನ್ನು ಪ್ರತಿಯೊಬ್ಬ ನಾಗರಿಕ ಸಮಾಜ ಖಂಡಿಸಲೇಬೇಕು ಇದರಲ್ಲಿ ಯಾವುದೇ ಕೋಮು ದ್ವೇಷಗಳನ್ನು ಅಳವಡಿಸದೆ ಆ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವುದು ಸರಕಾರದ ಕರ್ತವ್ಯವಾಗಿದೆ.ನ್ಯಾಯ ಕೊಡಿಸಬೇಕಿದ್ದ ಸರಕಾರದ ಅಧಿಕಾರಿಗಳು ಮಂತ್ರಿಗಳು ದಿನಕ್ಕೊಂದು ಹೇಳಿಕೆ ನೀಡುವುದರ ಮೂಲಕ ಮುಸ್ಲಿಂ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಲು ಶ್ರಮಿಸುತ್ತಿರುವುದು ಖಂಡನೀಯ.ಆಡಳಿತ ಸರ್ಕಾರದ ಪ್ರತಿನಿಧಿಗಳು ಇಂತಹ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು ಅಲ್ಪಸಂಖ್ಯಾತರ ರಕ್ಷಣೆಗೆ ನಿಲ್ಲಬೇಕು.ಆದ್ದರಿಂದ ಜಾತ್ಯತೀತ ನಿಲುವು ಇರುವ ಪ್ರತಿಯೊಬ್ಬ ಜನಪ್ರತಿನಿಧಿಗಳು ಇದರ ಬಗ್ಗೆ ಧ್ವ ನಿ ಎತ್ತುವ ಮೂಲಕ ಆ ಕುಟುಂಬಕ್ಕೆ ನ್ಯಾಯ ಒದಗಿಸಿ ಮಾತ್ರವಲ್ಲ ಇತ್ತೀಚಿನ ದಿನಗಳಲ್ಲಿ ಮುಸ್ಲಿಮರ ವಿರುದ್ಧ ಕೋಮು ದ್ವೇಷದ ಭಾಷಣಗಳು ನಡೆಯುತ್ತಿದೆ ಇದಕ್ಕೆ ಕೂಡಲೇ ಸರಕಾರ ಕಡಿವಾಣ ಹಾಕಬೇಕು ಎಂದು ಸುನ್ನೀ ಸಂಯುಕ್ತ ಜಮಾಅತ್ ವಿಟ್ಲ ಅಧ್ಯಕ್ಷರಾದ ಹಾಜಿ ಅಬ್ದುಲ್ ಹಮೀದ್ ಕೊಡಂಗಾಯಿ ಪತ್ರಿಕಾ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.





