ಮೇ 5ರಂದು ಪೆರುವಾಯಿ ಫಾತಿಮಾ ಮಾತಾ ಸಮುದಾಯ ಭವನದ ಉದ್ಘಾಟನೆ: ಸುಮಾರು 1.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ, 600 ಆಸನದ ವ್ಯವಸ್ಥೆ ಹೊಂದಿರುವ ಭವನ
ವಿಟ್ಲ: ಮೂರು ದಶಕದ ಇತಿಹಾಸವಿರುವ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮ ವ್ಯಾಪ್ತಿಯ ಮುಚ್ಚಿರಪದವು ಫಾತಿಮಾ ಮಾತೆಯ ದೇವಾಲಯವು 140 ಕುಟುಂಬಗಳ ವ್ಯಾಪ್ತಿಯ ಈ ದೇವಾಲಯದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಅದರ ಭಾಗವಾಗಿ ಮೇ 5 ರಂದು ಫಾತಿಮಾ ಮಾತಾ ಸಮುದಾಯ ಭವನದ ಉದ್ಘಾಟನೆ ಹಾಗೂ ಆರ್ಶೀವಚನ ನಡೆಯಲಿದೆ ಎಂದು
ಧರ್ಮಗುರು ಸೈಮನ್ ಡಿಸೋಜ ತಿಳಿಸಿದರು.
ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದರು. ಅಂದು ಬೆಳಗ್ಗೆ 9:15 ಗಂಟೆಗೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಪೀಟರ್ ಪಾವ್ಲ್ ಸಲ್ಡಾನ ನೇತೃತ್ವದಲ್ಲಿ ಪವಿತ್ರ ಬಲಿಪೂಜೆಯು ನೆರವೇರಲಿದ್ದು, ಬೆಳಗ್ಗೆ 10 ಗಂಟೆಗೆ ಸಮುದಾಯ ಭವನ ಉದ್ಘಾಟಿಸಿ ಆರ್ಶೀವಚಿಸಲಿದ್ದಾರೆ.
ಶ್ರೀ ಧಾಮ ಮಣಿಲಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಮೋಹನ್ ದಾಸ್ ಪರಮಹಂಸ ಸ್ವಾಮೀಜಿ, ಕುಕ್ಕಾಜೆ ಶ್ರೀ ಕಾಳಿಕಾಂಬಾ ಆಂಜನೇಯ ದೇವಾಸ್ಥಾನ ಧರ್ಮದರ್ಶಿ ಶ್ರೀ ಶ್ರೀ ಕೃಷ್ಣ ಗುರೂಜಿ, ಪೆರುವಾಯಿ ಜುಮ್ಮಾ ಮಸೀದಿಯ ಅಲ್ ಹಾಜ್ ಮೊಹಮ್ಮದ್ ಶರೀಫ್ ಮದನಿ,
ವಿಧಾನಸಭೆಯ ಮಾನ್ಯ ಸಭಾಧ್ಯಕ್ಷ ಯು.ಟಿ ಖಾದರ್ ಫರೀದ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಸಮುದಾಯ ಭವನದ ಉದ್ಘಾಟನೆ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮಂಜುನಾಥ ಭಂಡಾರಿ, ಕಿಶೋರ್ ಕುಮಾರ್, ಮುಖ್ಯಮಂತ್ರಿಗಳ ಉಪಕಾರ್ಯದರ್ಶಿ ಅರುಣ್ ಫುಟಾಡೋ, ಮಾಜಿ ಶಾಸಕರಾದ ಜೆ.ಆರ್. ಲೋಬೊ ಮತ್ತತರ ಗಣ್ಯರು ಭಾಗವಹಿಸಲಿದ್ದಾರೆ.
ಅಂದು ಸಂಜೆ 6 ಗಂಟೆಗೆ, ತುಳುನಾಡಿನ ಖ್ಯಾತ ಕಲಾವಿದರಾದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕ್ಕಾಡ್, ಭೋಜರಾಜ್ ವಾಮಂಜೂರು ಹಾಗೂ ಪ್ರಸಿದ್ಧ ಕಲಾವಿದರ ನಟನೆಯ ಏರ್ಲಾ ಗ್ಯಾರಂಟಿ ಅತ್ತ್ ನಾಟಕ ಪ್ರದರ್ಶನ ಗೊಳ್ಳಲಿದೆ.
ಫಾತಿಮಾ ಮಾತಾ ಸಮುದಾಯ ಭವನವು ಸುಮಾರು 1.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು, 600 ಆಸನದ ವ್ಯವಸ್ಥೆ ಹೊಂದಿದೆ. ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯದ, ಉತ್ತಮ ಗಾಳಿ ಬೆಳಕಿನ ವ್ಯವಸ್ಥೆ ಸೇರಿ ಹಲವು ಆಧುನಿಕ ವ್ಯವಸ್ಥೆ ವೈಶಿಷ್ಟ್ಯತೆ ಹೊಂದಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಡೆನಿಸ್ ಮೊಂತೇರೊ, ಕಾರ್ಯದರ್ಶಿ ವೈಲೇಟ್ ಕುವೆಲ್ಲೊ, ಸಮುದಾಯ ಭವನ ಕಟ್ಟಡ ಸಮಿತಿ ಸಂಚಾಲಕರಾದ ಚಾರ್ಲ್ಸ್ ಡಿ’ಸೋಜ ಹಾಗೂ ಮಾಧ್ಯಮ ಸಮಿತಿ ಸಂಚಾಲಕ ಎಡ್ವರ್ಡ್ ಡಿಸೋಜ ಮತ್ತು ಪ್ರವೀಣ್ ಡಿಸೋಜ ಉಪಸ್ಥಿತರಿದ್ದರು.





