ಹುಚ್ಚು ನಾಯಿ ದಾಳಿ: 5 ವರ್ಷದ ಬಾಲಕಿ ಸಾವು
ಮಲಪ್ಪುರಂ: ರೇಬೀಸ್‌ಗೆ ಒಳಗಾಗಿ 5 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ ಘಟನೆ ಮಲಪ್ಪುರಂನ ಪೆರುವಲ್ಲೂರಿನ ಕಕ್ಕತಡಂನಲ್ಲಿ ನಡೆದಿದೆ.
ಜಿಯಾ ಫಾರಿಸ್(5) ಮೃತ ಬಾಲಕಿ. ಮಾರ್ಚ್ 29 ರಂದು ಅಂಗಡಿಯಿಂದ ಕ್ಯಾಂಡಿ ಖರೀದಿಸಿ ಮನೆಗೆ ಹೋಗುತ್ತಿದ್ದ ವೇಳೆ ನಾಯಿ ಮಗುವಿಗೆ ಕಚ್ಚಿತ್ತು. ಮಗುವಿನ ತಲೆ, ಕುತ್ತಿಗೆ ಮತ್ತು ಕಾಲಿಗೆ ಕಚ್ಚಿದ್ದರಿಂದ ಗಂಭೀರವಾಗಿ ಗಾಯವಾಗಿತ್ತು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅದಾಗಲೇ ರೇಬೀಸ್ ದೃಢಪಟ್ಟಿತ್ತು.
ಕುತ್ತಿಗೆಯ ಮೇಲೆ ಗಾಯ ಗಂಭೀರವಾದ್ದರಿಂದ ಪುನಃ ಎ. 25 ರಂದು ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲದೇ ಬಾಲಕಿಗೆ ಜೋರಾಗಿ ಜ್ವರ ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆ ಫಲಕಾರಿ ಆಗದೇ ಸಾವನ್ನಪ್ಪಿದ್ದಾಳೆ.




