ಬ್ಯಾಂಕ್ ಎದುರು ನಿಲ್ಲಿಸಿದ್ದ ಸ್ಕೂಟರ್‌ನ ಡಿಕ್ಕಿಯಿಂದ 13 ಲಕ್ಷ ರೂ. ದೋಚಿದ ಖದೀಮರು
ಹಾಸನ: ಬ್ಯಾಂಕ್ ಎದುರು ನಿಲ್ಲಿಸಿದ್ದ ಸ್ಕೂಟರ್‌ನ ಡಿಕ್ಕಿಯಿಂದ 13 ಲಕ್ಷ ರೂ. ನಗದನ್ನು ಖದೀಮರು ದೋಚಿರುವ ಘಟನೆ ಸಕಲೇಶಪುರ ಪಟ್ಟಣದ ಬಿ.ಎಂ ರಸ್ತೆಯಲ್ಲಿ ನಡೆದಿದೆ.
ಕುಡುಗರಹಳ್ಳಿ ಗ್ರಾಮದ ಯೋಗೇಶ್ ಹಣ ಕಳೆದುಕೊಂಡ ವ್ಯಕ್ತಿ. ಯೋಗೇಶ್ ಅವರು ತುರ್ತು ಕಾರ್ಯದ ನಿಮಿತ್ತ ಮನೆಯಲ್ಲಿದ್ದ ಚಿನ್ನಾಭರಣವನ್ನು ನಗರದ ಬ್ಯಾಂಕ್ ಆಫ್ ಬರೋಡದಲ್ಲಿ ಗಿರವಿ ಇಟ್ಟು 13 ಲಕ್ಷ ರೂ. ಸಾಲ ಪಡೆದಿದ್ದರು.





