March 13, 2026

ಬ್ರಹ್ಮಾವರ: ಮಹಿಳೆಗೆ ಹಲ್ಲೆ ನಡೆಸಿ ಕರಿಮಣಿ ಸರ ಕಳವು: ಮೂವರು ಆರೋಪಿಗಳ ಬಂಧನ

0
image_editor_output_image1174343432-1745832191210.jpg

ಬ್ರಹ್ಮಾವರ: ಮನೆಯ ಕಂಪೌಂಡ್ ನ ಹೊರಗೆ ನಿಂತಿದ್ದ ಮಹಿಳೆಯೊಬ್ಬರಿಗೆ ಹಲ್ಲೆ ನಡೆಸಿ ಅವರ ಕುತ್ತಿಗೆಯಲ್ಲಿದ್ದ ಕರಮಣಿ ಸರ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ನಾರ್ತ್ ಗೋವಾದ ಪೊರ್ವರ್ಹಿಮಂ ನಿವಾಸಿ ಗೌರೀಶ ರೋಹಿದಾಸ್ ಕೆರ್ಕರ್(37), ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಮುಹಿನುದ್ದೀನ್ ಬಾಗಲಕೋಟ್(31), ಮುಂಬೈ ವಿಲೆ ಪಾರ್ಲೆಯ ಸುರ್ಜಿತ್ ಗೌತಮ್ ಕಾರ್(27) ಎಂದು ಗುರುತಿಸಲಾಗಿದೆ. ಎಪ್ರಿಲ್ 26 ರಂದು ಬ್ರಹ್ಮಾವರ ಆದರ್ಶ ನಗರದ ಪದ್ಮಾ(70) ಎಂಬವರು ಮನೆಯ ಕಂಪೌಂಡಿನ ಹೊರಗಡೆ ರಸ್ತೆಯಲ್ಲಿ ಹೂವುಗಳನ್ನು ಕೊಯ್ಯುತ್ತಿರುವಾಗ ಕಾರಿನಲ್ಲಿ ಬಂದ ಆರೋಪಿಗಳು, ಪದ್ಮಾರಿಗೆ ಹಲ್ಲೆ ನಡೆಸಿ, ಕುತ್ತಿಗೆಯಲ್ಲಿದ್ದ ಸುಮಾರು 40 ಗ್ರಾಮ್ ತೂಕದ 2,50,000 ರೂ. ಮೌಲ್ಯದ ಚಿನ್ನದ ಕರಿಮಣಿ ಸರವನ್ನು ಕಳವು ಮಾಡಿ ಪರಾಗಿಯಾಗಿದ್ದರು. ಇದರಿಂದ ಪದ್ಮ ತೀವ್ರವಾಗಿ ಗಾಯಗೊಂಡಿದ್ದರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು

Leave a Reply

Your email address will not be published. Required fields are marked *

error: Content is protected !!