ಕರೆಯಲ್ಲಿ ಈಜು ಕಲಿಸಲು ಹೋಗಿ ತಂದೆ, ಮಗಳು ನೀರಲ್ಲಿ ಮುಳುಗಿ ಸಾವು
ಚಿಕ್ಕಬಳ್ಳಾಪುರ: ತಂದೆ ಮಗಳಿಗೆ ಕರೆಯಲ್ಲಿ ಈಜು ಕಲಿಸಲು ಹೋಗಿ ಇಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಂದೆ ನಾಗೇಶ್ (42) ಮಗಳು ಧನುಶ್ರೀ (12) ಮೃತ ದುರ್ದೈವಿಗಳು. ಮಗಳಿಗೆ ಈಜು ಕಲಿಸಲೆಂದು ಹೋದ ತಂದೆ ಕೆರೆಯಲ್ಲಿ ಹೂಳು ತುಂಬಿದ್ದರಿಂದ ಹಳಿಯಲ್ಲಿ ಸಿಲುಕಿ ಇಬ್ಬರು ಸಾವನ್ನಪ್ಪಿದ್ದಾರೆ. ಮೃತ ಧನುಶ್ರೀ ಭರತನಾಟ್ಯದಲ್ಲಿ ಖ್ಯಾತಿ ಪಡೆದಿದ್ದಳು.





