December 15, 2025

ಗೋಕರ್ಣ: ಪ್ರವಾಸಕ್ಕೆ ಬಂದಿದ್ದ ಮೆಡಿಕಲ್ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ನೀರುಪಾಲು

0
image_editor_output_image-1770022022-1745659380245.jpg

ಗೋಕರ್ಣ: ಕರ್ನಾಟಕದ ಪ್ರವಾಸಕ್ಕೆ ಬಂದಿದ್ದ ತಮಿಳುನಾಡಿನ ಇಬ್ಬರು ಮೆಡಿಕಲ್ ಕಾಲೇಜಿನ ವಿಧ್ಯಾರ್ಥಿನಿಯರು ಸಮುದ್ರದ ಅಲೆಗಳ ಹೊಡೆದತಕ್ಕೆ ಕೊಚ್ಚಿ ಹೋದ ಘಟನೆ ಗೋಕರ್ಣದ ಕುಡ್ಲೆ ಕಡಲ ತೀರದ ಜಟಾಯುತೀರ್ಥದ ಬಳಿ ಗುರುವಾರ ಸಂಜೆ ಸಂಭವಿಸಿದೆ.

ಮೃತರನ್ನು ತಮಿಳುನಾಡು ತಿರುಚಿಯ ಎಸ್.ಆರ್.ಎಂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಕನ್ನಿಮೋಳಿ ಈಶ್ವರನ್(23) ಮತ್ತು ಹಿಂದುಜಾ ನಟರಾಜನ್ (23) ಎಂದು ಗುರುತಿಸಲಾಗಿದೆ. ಎಂ.ಬಿ.ಬಿ.ಎಸ್ ಅಂತಿಮ ವರ್ಷದ ವಿದ್ಯಾರ್ಥಿಗಳಾಗಿದ್ದ ಇವರು ಪ್ರವಾಸದ ಸಂದರ್ಭದಲ್ಲಿ ಗೋಕರ್ಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ.

ತಮಿಳುನಾಡು ತಿರುಚಿಯ ಎಸ್.ಆರ್.ಎಂ ಮೆಡಿಕಲ್‌ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಅಂತಿಮ ಪರೀಕ್ಷೆ ಬರೆದು ರಜೆಯ ಮೇಲೆ ತೆರಳಿದ್ದ 23 ಜನ ವಿದ್ಯಾರ್ಥಿನಿಯರ ತಂಡ ಚೆನ್ನೈನ ಬ್ರೆಟಿ ಟ್ರಾವೆಲ್ಸ್ ಮೂಲಕ ಧಾಂಡೇಲಿ, ಗೋಕರ್ಣ, ಮುರ್ಡೇಶ್ವರ ಪ್ರವಾಸಕ್ಕೆ ಆಗಮಿಸಿದ್ದು ದಾಂಡೇಲಿಯಿಂದ ಅಂಕೋಲಾ ತಲುಪಿ ವಿಭೂತಿ ಪಾಲ್ಸ್ ಗೆ ಹೋಗಿ ಸಂಜೆ ಗೋಕರ್ಣ ತಲುಪಿದ್ದರು. ವಿದ್ಯಾರ್ಥಿನಿಯರ ಜೊತೆಗೆ ಬಂದಿದ್ದ ಟ್ರಾವಲ್ ಸಂಸ್ಥೆಯ ಗೈಡ್ ಗಾಂಧಿ ಶಿವಕುಮಾರನ್ ಎನ್ನುವವರು ಸೂರ್ಯಾಸ್ತ ತೋರಿಸುವುದಾಗಿ ಹೇಳಿ ಕುಡ್ಲೆ ಕಡಲ ತೀರದ ಜಟಾಯು ತೀರ್ಥ ಪ್ರದೇಶಕ್ಕೆ ತೆರಳಿದ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಅಲೆಗಳ ಹೊಡೆತಕ್ಕೆ ಸಮುದ್ರಪಾಲಾಗಿದ್ದಾರೆ. ಸ್ಥಳೀಯ ಮಣಿರಾಜು ಎನ್ನುವವರು ರಕ್ಷಣೆಗೆ ದಾವಿಸಿ ಸಮುದ್ರಕ್ಕೆ ಜಿಗಿದಿದ್ದು ಅಲೆಗಳ ತೀವ್ರತೆ ಹೆಚ್ಚಿದ ಕಾರಣ ಅವರು ಸಹ ಅಪಾಯಕ್ಕೆ ಸಿಲುಕಿದ್ದು ಕುಡ್ಲೆ ಬೀಚ್ ಬೋಟ್ ಮೂಲಕ ಸಾಗಿ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿದ್ಯಾರ್ಥಿನಿಯರ ಮೃತ ದೇಹಗಳನ್ನು ಮೇಲೆತ್ತಿ ತರಲಾಗಿದ್ದು ಗೋಕರ್ಣ ಪೊಲೀಸ್ ನಿರೀಕ್ಷಕ ಶ್ರೀಧರ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!