ಬೆಳ್ತಂಗಡಿ: ಮನೆಮಂದಿ ನಿದ್ದೆಗೆ ಜಾರಿದ ಮನೆಗೆ ನುಗ್ಗಿ ಕಳ್ಳತನ: ಚಿನ್ನಾಭರಣ, ನಗದು ಕಳವು
ಬೆಳ್ತಂಗಡಿ: ರಾತ್ರಿಯ ವೇಳೆ ಮನೆಮಂದಿ ಎಲ್ಲಾ ನಿದ್ದೆಗೆ ಜಾರಿದ ಸಂದರ್ಭದಲ್ಲಿ ಮನೆಗೆ ನುಗ್ಗಿ ಕಳ್ಳತನ ನಡೆಸಿ ಚಿನ್ನಾಭರಣ ಸಹಿತ ನಗದುಗಳನ್ನು ದೋಚಿಕೊಂಡು ಹೋಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ತೆಕ್ಕಾರುವಿನ ಮನೆಯಲ್ಲಿ ಏ.23ರಂದು ರಾತ್ರಿ ನಡೆದಿದೆ.
ಗುತ್ತು ಮನೆ ನಿವಾಸಿ ಮುಸ್ತಫಾ ರವರ ಮನೆಗೆ ಕಳ್ಳರು ಹಿಂಬದಿ ಬಾಗಿಲಿನಿಂದ ಬೀಗ ಮುರಿದು ಮನೆಯೊಳಗೆ ಬಂದದ್ದು ಮಾತ್ರವಲ್ಲದೇ ಸುಮಾರು 5 ಪವನ್ ನಷ್ಟು ಚಿನ್ನ, ಮೂರು ಸಾವಿರ ರೂಪಾಯಿ ನಗದುಗಳನ್ನು ಕಳವುಗೈದು ಪರಾರಿಯಾಗಿದ್ದಾರೆ.
ನಿನ್ನೆ ಸುಮಾರು ಮೂರರಿಂದ ನಾಲ್ಕುಗಂಟೆ ಹೊತ್ತಿಗೆ ಈ ಘಟನೆ ನಡೆದಿದೆ ಎಂದು ಮನೆಯವರು ತಿಳಿಸಿದ್ದಾರೆ. ಅಲ್ಲದೇ ಮನೆಯ ಬ್ಯಾಗ್‌ಗಳನ್ನು ಕದ್ದುಕೊಂಡು ಹೋಗಿದ್ದು, ಬಳಿಕ ಅದರಲ್ಲಿ ಏನೂ ಇಲ್ಲದ್ದನ್ನು ನೋಡಿ ಪಕ್ಕದ ಅಂಗಳದಲ್ಲಿ ಬಿಸಾಕಿ ಹೋಗಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದೆ.





