ಸ್ನೇಹಿತರೊಂದಿಗೆ ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲು
ಹುಲಸೂರು: ಸ್ನೇಹಿತರೊಂದಿಗೆ ಈಜಲು ಬಾವಿಗೆ ಇಳಿದಿದ್ದ ಇಬ್ಬರು ಯುವಕರು ನೀರು ಪಾಲಾದ ಘಟನೆ ರವಿವಾರ ಮಧ್ಯಾಹ್ನ ತಾಲೂಕಿನ ಮುಚಳಂಬ ಗ್ರಾಮದಲ್ಲಿ ನಡೆದಿದೆ.
ಮುಚಳಂಬ ಗ್ರಾಮದ ಅವಿನಾಶ್ ಶರಣಪ್ಪ ಮಚಕೂರೆ (16) ಹಾಗೂ ಭಾಲ್ಕಿ ತಾಲೂಕಿನ ಕೋಟಗೇರಾ ಗ್ರಾಮದ ಭಾಗೇಶ ಕಮಾಲಾಕರ ಮಾನೆ (16) ಮೃತ ಬಾಲಕರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಬಳಿಕ ರಜೆ ಇರುವುದರಿಂದ ಭಾಗೇಶ ಮಾನೆ ಎಂಬ ಬಾಲಕ ರವಿವಾರ ಮುಚಳಂಬ ಗ್ರಾಮಕ್ಕೆ ಹೋಗಿದ್ದು, ಐದು ಜನ ಸ್ನೇಹಿತರ ಜೊತೆ ಗ್ರಾಮ ಸಮೀಪದ ಬಾವಿಯೊಂದರಲ್ಲಿ ಈಜಲು ಹೋಗಿದ್ದರು.





