ನದಿಗೆ ಹಾರಿ ಮಹಿಳೆ ಆತ್ಮಹತ್ಯೆ
ಚನ್ನಮ್ಮನ ಕಿತ್ತೂರ: ಮಹಿಳೆಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚನ್ನಮ್ಮನ ಕಿತ್ತೂರ ಎಂಬಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಇಲ್ಲಿಯ ನೇಕಾರ ಓಣಿಯ ನಿವಾಸಿ ನೀಲವ್ವ (ನೀಲಾವತಿ) ವಿಠ್ಠಲ ಮೋರಕರ (61) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ನೀಲವ್ವ ಏಪ್ರಿಲ್ 18 ಶುಕ್ರವಾರ ಮದ್ಯಾಹ್ನ 12 ಗಂಟೆ ಸುಮಾರಿಗೆ ಮನೆಯಿಂದ ಹೊರಟು ಹೋಗಿದ್ದರು. ಬಳಿಕ ಏಪ್ರಿಲ್ 19 ರಂದು ಮಧ್ಯಾಹ್ನ 2 ಗಂಟೆಯೊಳಗೆ ಎಮ್.ಕೆ. ಹುಬ್ಬಳ್ಳಿ ಗಂಗಾಂಬಿಕಾ ದೇವಾಲಯದ ಹತ್ತಿರದ ಮಲಪ್ರಭಾ ನದಿಯಲ್ಲಿ ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.





