ವಿಟ್ಲ: ಡಿ ಗ್ರೂಪ್ ವತಿಯಿಂದ ಜನಪ್ರಿಯ ಆಸ್ಪತ್ರೆ ವೈದ್ಯರಿಂದ ಉಚಿತ ಸುನ್ನತ್(ಮುಂಜಿ) ಕಾರ್ಯಕ್ರಮ
ವಿಟ್ಲ: ಡಿ’ ಗ್ರೂಪ್ ವಿಟ್ಲ ಇದರ ವತಿಯಿಂದ ಉಚಿತ ಸುನ್ನತ್(ಮುಂಜಿ) ಕಾರ್ಯಕ್ರಮ ಹಾಗೂ ವಿಟ್ಲ ರೇಂಜ್ ಮಟ್ಟದ ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಅಭಿನಂದನೆ ಕಾರ್ಯಕ್ರಮ ಶುಕ್ರವಾರ ವಿಟ್ಲದ ಬ್ರೈಟ್ ಅಡಿಟೋರಿಯಂ ಹಾಲ್ ನಲ್ಲಿ ನಡೆಯಿತು.
ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬ್ ಮುಹಮ್ಮದ್ ಆರೀಫ್ ಬಾಖವಿ ಉದ್ಘಾಟಿಸಿದರು. ವಿಟ್ಲ ಟೌನ್ ಮಸೀದಿ ಖತೀಬ್ ಅಬ್ಬಾಸ್ ಮದನಿ ದುವಾಃ ನೆರವೇರಿಸಿದರು. ಡಿ ಗೂಫ್ ಅಧ್ಯಕ್ಷ ಶಾಕೀರ್ ಅಳಕೆಮಜಲು ಅಧ್ಯಕ್ಷತೆ ವಹಿಸಿದ್ದರು.

ಮದರಸ ಪರೀಕ್ಷೆ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜನಪ್ರಿಯ ಆಸ್ಪತ್ರೆಯ ವೈದ್ಯರಿಂದ ನಡೆದ ಮುಂಜಿ ಕಾರ್ಯಕ್ರಮದಲ್ಲಿ 62 ಮಕ್ಕಳು ಪ್ರಯೋಜನ ಪಡೆದರು.
ಮುಖ್ಯ ಅಥಿತಿಗಳಾಗಿ ಜನಪ್ರಿಯ ಫೌಂಡೇಶನ್ ಅಧ್ಯಕ್ಷ ಅಬ್ದುಲ್ ಬಶೀರ್ ವಿ.ಕೆ ಮಾತನಾಡಿ ಡಿ ಗ್ರೂಪ್ ವತಿಯಿಂದ ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದು, ಮುಂಜಿ ಕಾರ್ಯಕ್ರಮ ಮಹತ್ವದ ಕಾರ್ಯವಾಗಿದೆ ಎಂದರು.

ಮುಸ್ಲಿಂ ಒಕ್ಕೂಟದ ಗೌರವಾಧ್ಯಕ್ಷ ಎಂ.ಎಸ್ ಮಹಮ್ಮದ್, ವಿಟ್ಲ ಟೌನ್ ಮಸೀದಿ ನಿರ್ವಾಹಣ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಶಾಫಿ, ಬಂಟ್ವಾಳ ಜಂಇಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ, ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯ ವಿ.ಕೆ.ಎಮ್ ಅಶ್ರಫ್, ವಿಟ್ಲ ಕೇಂದ್ರ ಜುಮಾ ಮಸೀದಿ ಕೋಶಾಧಿಕಾರಿ ಶರೀಫ್ ಪೊನ್ನೋಟ್ಟು, ಉದ್ಯಮಿ ವಿ.ಹೆಚ್ ಅಶ್ರಫ್, ಬ್ರೈಟ್ ಅಡಿಟೋರಿಯಂನ ಮಾಲಕ ಆರ್.ಕೆ ಅಬ್ದುಲ್ಲಾ ಹಾಜಿ, ಪಿ.ಎ ಕಾಲೇಜಿನ
ಡಾ। ಸೈಯ್ಯದ್ ಅಮೀನ್ ಅಹ್ಮದ್,
ಡಿ ಗ್ರೂಫ್ ಗೌರವಾಧ್ಯಕ್ಷ ಝುಬೈರ್ ಮಾಸ್ಟರ್, ಹೊರೈಝನ್ ಪಬ್ಲಿಕ್ ಸ್ಕೂಲ್ ನ ಅಧ್ಯಕ್ಷ ಅಝೀಝ್ ಸನ, ವಿಟ್ಲ ಕೇಂದ್ರ ಜುಮಾ ಮಸೀದಿ ಉಪಾಧ್ಯಕ್ಷ ವಿ.ಎಸ್. ಇಬ್ರಾಹಿಂ ಒಕ್ಕೆತ್ತೂರು, ಎಐಟಿಯುಸಿಯ ಕಾರ್ಯದರ್ಶಿ ಇಕ್ಬಾಲ್ ಹಳೆಮನೆ,
ಮೊದಲಾದವರು ಉಪಸ್ಥಿತರಿದ್ದರು.
ಖಲಂದರ್ ಪರ್ತಿಪ್ಪಾಡಿ ಸ್ವಾಗತಿಸಿ, ನಿರೂಪಿಸಿದರು. ರಾಝೀಕ್ ಒಕ್ಕೆತ್ತೂರು ವಂದಿಸಿದರು.






