March 13, 2026

ಬಂಟ್ವಾಳ: ತೋಡಿಗೆ ಬಿದ್ದ ದ್ವಿಚಕ್ರ ವಾಹನ: ಸವಾರ ಮೃತ್ಯು

0
AA-160425-accident.jpg

ಬಂಟ್ವಾಳ: ದ್ವಿಚಕ್ರ ವಾಹನ ಸವಾರನೋರ್ವ ತೋಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಪಚ್ಚಿನಡ್ಕ ಎಂಬಲ್ಲಿ ನಡೆದಿದೆ.

ಕಳ್ಳಿಗೆ ಗ್ರಾಮದ ನಿವಾಸಿ ಮೆಲ್ರೋಯಿ ಡೇಸಾ (24) ಮೃತಪಟ್ಟ ವ್ಯಕ್ತಿ.

ಮೆಲ್ರೋಯಿ ಡೇಸಾ ಅವರು ಬ್ರಹ್ಮರಕೋಟ್ಲ ಕಡೆಯಿಂದ ಪಚ್ಚಿನಡ್ಕ ಕಡೆಗೆ ಬರುತ್ತಿರುವ ವೇಳೆ ದ್ವಿಚಕ್ರ ವಾಹನ ತೀರಾ ರಸ್ತೆಯ ಬದಿಗೆ ಸರಿದು ಬಳಿಕ ನಿಯಂತ್ರಣ ಕಳೆದು ಸ್ಕೂಟರ್ ಸಮೇತ ತೋಡಿಗೆ ಬಿದ್ದು ಗಾಯನೋವುಗಳಾಗಿದ್ದವು. ಕೂಡಲೇ ಸವಾರನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಪರೀಕ್ಷೆ ನಡೆಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪಾಣೆಮಂಗಳೂರು ಟ್ರಾಫಿಕ್ ಎಸ್ ಐ ಸುತೇಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!