March 7, 2026

ವಿಟ್ಲ: ಸೇರಾಜೆ ಬೈಲು ರಸ್ತೆಯಲ್ಲಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ನಾಗರಿಕರ ತೀವ್ರ ವಿರೋಧ: ಪ.ಪಂಚಾಯತ್ ಗೆ ಮನವಿ ಸಲ್ಲಿಸಿದ ಗ್ರಾಮಸ್ಥರು

0
IMG-20250409-WA0001.jpg

ವಿಟ್ಲ: ಪಟ್ಟಣದ 10ನೇ ವಾರ್ಡಿನ ಸೇರಾಜೆ ಬೈಲು ರಸ್ತೆಯ ಕೊನೆಯಲ್ಲಿ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಲು ಪಟ್ಟಣ ಪಂಚಾಯತ್ ಮುಂದಾಗಿದ್ದು, ಇದಕ್ಕೆ ಸ್ಥಳೀಯ ನಾಗರಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಸ್ಥಳೀಯ ನಿವಾಸಿಗಳು ಅಧಿಕಾರಿಗಳಿಗೆ ಸಲ್ಲಿಸಿದ ಆಕ್ಷೇಪಣಾ ಪತ್ರದಲ್ಲಿ, ತ್ಯಾಜ್ಯ ಘಟಕದ ನಿರ್ಮಾಣದಿಂದ ಊರಿನ ಕೃಷಿ ಭೂಮಿಗಳಿಗೆ, ಕುಡಿಯುವ ನೀರಿನ ಕಣಿವೆಗಳಾದ ಕೊಳವೆ ಬಾವಿಗಳಿಗೆ ಹಾನಿಯ ಸಂಭವವಿದ್ದು, ಸಾಂಕ್ರಾಮಿಕ ರೋಗಗಳ ಆತಂಕವೂ ಇದೆ ಎಂದು ತಿಳಿಸಿದ್ದಾರೆ. ಜೊತೆಗೆ ಇದು ಜನಸಂಚಾರದ ಪ್ರದೇಶವಾಗಿರುವುದರಿಂದ ಸಾರ್ವಜನಿಕರ ದೈನಂದಿನ ಜೀವನಕ್ಕೂ ತೊಂದರೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

“ಈ ತ್ಯಾಜ್ಯ ಘಟಕವನ್ನು ನಮ್ಮ ಗ್ರಾಮದಲ್ಲಿ ನಿರ್ಮಿಸಲು ನಾವು ಯಾವುದೇ ರೀತಿಯ ಸಹಕಾರ ನೀಡುವುದಿಲ್ಲ. ಇದು ಗ್ರಾಮಸ್ಥರ ಆರೋಗ್ಯಕ್ಕೂ ಪರಿಸರಕ್ಕೂ ಮಾರಕವಾಗಿದೆ. ಪರಿಸ್ಥಿತಿ ಗಂಭೀರವಾದರೆ ರಸ್ತೆ ತಡೆ ಹೋರಾಟ ಹಾಗೂ ಕಾನೂನು ಹೋರಾಟ ನಡೆಸುವೆವು,” ಎಂಬುದಾಗಿ ಸೇರಾಜೆ ರಸ್ತೆಯ ನಾಗರಿಕರು ತಮ್ಮ ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.

ಸ್ಥಳೀಯ ಸಂಸ್ಥೆಗಳು ಹಾಗೂ ಅಧಿಕಾರಿಗಳು ಈ ಬಗ್ಗೆ ಸೂಕ್ತ ಗಮನ ಹರಿಸಿ, ಜನರ ಆರೋಗ್ಯ ಹಾಗೂ ಪರಿಸರದ ರಕ್ಷಣೆಯ ದೃಷ್ಟಿಯಿಂದ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂಬ ನಿರೀಕ್ಷೆಯಿದೆ. ಆದರೆ ಗ್ರಾಮಸ್ಥರ ತೀವ್ರ ಆಕ್ಷೇಪಣೆಗಳ ನಡುವೆಯೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ನಿರ್ಲಕ್ಷ್ಯವಿಲ್ಲದೆ ಘಟಕ ನಿರ್ಮಾಣ ಕಾರ್ಯವನ್ನು ಮುಂದುವರಿಸುತ್ತಿರುವುದು ಚಿಂತೆಯ ವಿಷಯವಾಗಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ಹತ್ತಿರದಲ್ಲೇ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು

Leave a Reply

Your email address will not be published. Required fields are marked *

You may have missed

error: Content is protected !!