ಮಂಗಳೂರು: ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ ಗೆ ದ್ವಿಚಕ್ರ ವಾಹನ ಢಿಕ್ಕಿ: ಇಬ್ಬರು ವಿದ್ಯಾರ್ಥಿಗಳು ಮೃತ್ಯು, ಓರ್ವನಿಗೆ ಗಾಯ
ಮಂಗಳೂರು: ದ್ವಿಚಕ್ರ ವಾಹನವೊಂದು ಸವಾರನ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಮೃತ ಪಟ್ಟು, ಓರ್ವ ಗಾಯಗೊಂಡ ಘಟನೆ ಮಂಗಳೂರು ನಗರದ ಕುಂಟಿಕಾನ- ಕೆಪಿಟಿ ಜಂಕ್ಷನ್ ಮಧ್ಯೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದೆ.
ಕೇರಳದ ಕಾಸರಗೋಡು ಜಿಲ್ಲೆಯ ಚೆರ್ವತ್ತೂರು ಕೈಯೂರು ನಿವಾಸಿ ಧನುರ್ವೇದ್ ಸಿ (19), ಕಣ್ಣೂರು ಜಿಲ್ಲೆ ಪಿಣರಾಯಿ ನಿವಾಸಿ ಸಂಕೀರ್ತ್ (25) ಮೃತಪಟ್ಟವರು.
ತಿರುವನಂತಪುರ ಪತ್ತಮಕ್ಕಲು ನಿವಾಸಿ ಸಿಬಿ ಸ್ಯಾಮ್ (25) ಗಾಯಗೊಂಡವರು. ಮೂವರೂ ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿರುತ್ತಾರೆ.
ಮೂವರೂ ಒಂದೇ ದಿಚಕ್ರ ವಾಹನದಲ್ಲಿ ಕುಳಿತುಕೊಂಡು ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಸಂಕೀರ್ತ್ ಬೈಕ್ ಚಲಾಯಿಸುತ್ತಿದ್ದರು. ಧನುರ್ವೇದ್ ಮಧ್ಯದಲ್ಲಿ, ಶ್ಯಾಮ್ 3ನೇ ವ್ಯಕ್ತಿಯಾಗಿ ಕುಳಿತ್ತಿದ್ದರು. ಕುಂಟಿಕಾನ-ಕೆಪಿಟಿ ರಸ್ತೆಯಲ್ಲಿ ದಿಚಕ್ರ ವಾಹನ ಸಾಗುತ್ತಿದ್ದಾಗ ಸವಾರನ ನಿಯಂತ್ರಣ ತಪ್ಪಿ ವಾಹನ ಕೆಪಿಟಿ ಎಸ್‌ಕೆಎಸ್ ಬಳಿ ಓಪನ್ ಡಿವೈಡರ್‌ಗೆ ಢಿಕ್ಕಿಯಾದ ಪರಿಣಾಮ ಮೂವರು ವಾಹನ ಸಮೇತ ರಸ್ತೆಗೆ ಬಿದ್ದಿದ್ದಾರೆ.




