ವಿಟ್ಲ: 400KV ಸರ್ವೇ ಕಾರ್ಯಕ್ಕೆ ಬಂದ ಅಧಿಕಾರಿಗಳು:
ದಿಗ್ಬಂಧನ ಹಾಕಿ ಹಿಂದಕ್ಕೆ ಕಳುಹಿಸಿದ ಸಾರ್ವಜನಿಕರು
ವಿಟ್ಲ: ೪೦೦ಕೆ. ವಿ. ಉಡುಪಿ-ಕಾಸರಗೊಡು ವಿದ್ಯುತ್ ಮಾರ್ಗ ರಚನೆಯ ಕಾರ್ಯವನ್ನು ವೀರಕಂಭ ಅರಣ್ಯ ವ್ಯಾಪ್ತಿಯಲ್ಲಿ ಸದ್ದಿಲ್ಲದೆ ಆಗಮಿಸಿ ಗೋಪುರ ನಿಲ್ಲುವ ಸ್ಥಗಳನ್ನು ಗುರುತಿಸುವ ಕಾರ್ಯಕ್ಕೆ ಮುಂದಾಗಿರುವುದು ಸಾರ್ವಜನಿಕರ ಆಕ್ರೋಶಗೊಂಡು ದಿಗ್ಬಂಧನ ಹಾಕಿದ ಘಟನೆ ನಡುವಳಚ್ಚಿಲ್ ನಲ್ಲಿ ನಡೆದಿದೆ.

ಸುಮಾರು ೧೦ರಿಂದ ೧೫ ಮಂದಿ ವಿವಿಧ ವಾಹನಗಳ ಮೂಲಕ ಆಗಮಿಸಿ ಒಳ ರಸ್ತೆಯಲ್ಲಿ ತೆರಳುವ ಸಂದರ್ಭ ಸ್ಥಳೀಯರಿಗೆ ಅನುಮಾನ ಬಂದಿದ್ದು, ಪ್ರಶ್ನಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಸಂದರ್ಭ ವೀರಕಂಬ ಅರಣ್ಯ ಪ್ರದೇಶದಲ್ಲಿ ವಿದ್ಯುತ್ ಮಾರ್ಗದ ಸರ್ವೇ ಕಾರ್ಯಕ್ಕೆ ಬಂದಿದ್ದು ಎಂದಿರುವುದು ರೈತರನ್ನು ಹಾಗೂ ಸ್ಥಳೀಯರನ್ನು ಕೆರಳಿಸಿದೆ.
ವಿಧಾನ ಸೌಧದಲ್ಲಿ ಬಂಟ್ವಾಳ ಶಾಸಕರು ವಿದ್ಯುತ್ ಮಾರ್ಗದ ಬಗ್ಗೆ ಮಾತನಾಡಿದಾಗ ಇಂಧನ ಸಚಿವರು ಸದ್ಯ ಕಾಮಗಾರಿಯನ್ನು ಸ್ಥಗಿತ ಮಾಡುವಂತೆ ಸೂಚಿಸಲಾಗಿದೆ ಎಂದು ಬಗ್ಗೆ ಉತ್ತರ ನೀಡಿದ್ದರು. ರೈತರ ಸಭೆಯ ಬಳಿಕವೆ ಮುಂದಿನ ನಡೆ ಎಂದು ಹೇಳಿ ಈಗ ಗೌಪ್ಯವಾಗಿ ಕೆಲಸ ಕಾರ್ಯಗಳನ್ನು ನಡೆಸುತ್ತಿರುವುದು ಏಕೆ ಎಂದು ಸ್ಥಳಕ್ಕೆ ಬಂದವರನ್ನು ತಡೆದಿದ್ದಾರೆ.
ವಿಟ್ಲ ಪೊಲೀಸರು ಆಗಮಿಸಿದಾಗ ಸರಿಯಾದ ಉತ್ತರ ನೀಡಬೇಕೆಂದು ಹೇಳಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳೂ ಸ್ಥಳಕ್ಕಾಗಿಮಿಸಿ ಅರಣ್ಯ ವ್ಯಾಪ್ತಿಯಲ್ಲಿ ಗುರುತು ಮಾಡುವ ನಿಟ್ಟಿನಲ್ಲಿ ಆಗಮಿಸಿದ್ದಾರೆ ಎಂದು ತಿಳಿಸಿದರು. ಕಂಪನಿಯ ಕಡೆಯಿಂದ ಬಂದವರು ಡಿ.ಸಿ. ಯ ಅನುಮತಿ ಇಲ್ಲ ಸ್ಥಳಕ್ಕೆ ಬರುವುದಿಲ್ಲ ಎಂದು ಪತ್ರ ನೀಡಿದ ಬಳಿಕ ಅವರನ್ನು ಸ್ಥಳದಿಂದ ಬಿಟ್ಟು ಕಳುಹಿಸಲಾಯಿತು.





