March 11, 2026

ಮೋಹನ್ ಲಾಲ್ ಅಭಿನಯದ ‘ಎಂಪುರಾನ್’ ಚಿತ್ರದ ಸಹನಿರ್ಮಾಪಕ ಗೋಕುಲಂ ಗೋಪಾಲನ್ ಕಛೇರಿಗೆ ಈಡಿ ದಾಳಿ

0
580889-ManojKumar-1374592392-1.jpg

ಕೊಚ್ಚಿ: ಅಗಾಧ ಯಶಸ್ಸು ಕಂಡಿರುವ ಮಲಯಾಳಮ್ ಚಿತ್ರ ‘ಎಲ್‌2: ಎಂಪುರಾನ್’ನ ಸಹನಿರ್ಮಾಪಕ ಗೋಕುಲಮ್ ಗೋಪಾಲನ್‌ ರಿಗೆ ಸಂಬಂಧಿಸಿದ ಕಟ್ಟಡಗಳಿಂದ ಶುಕ್ರವಾರ 1.5 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಈಡಿ) ತಿಳಿಸಿದೆ. ಗೋಪಾಲನ್‌ ರ ವ್ಯವಹಾರಗಳ ಬಗ್ಗೆ ತನಿಖೆ ಮುಂದುವರಿಯುತ್ತಿದೆ ಎಂದು ಅದು ಹೇಳಿದೆ.

ಕೊಝಿಕ್ಕೋಡ್‌ನಲ್ಲಿರುವ ಗೋಕುಲಮ್ ಮಾಲ್ ಮತ್ತು ಶ್ರೀ ಗೋಕುಲಮ್ ಚಿಟ್ ಆಯಂಡ್ ಫೈನಾನ್ಸ್ ಕೊ ಲಿಮಿಟೆಡ್‌ ನ ಕಚೇರಿಗಳು ಹಾಗೂ ಕೇರಳ ಮತ್ತು ತಮಿಳುನಾಡಿನಲ್ಲಿರುವ ಸಂಬಂಧಿತ ಇತರ ಕಟ್ಟಡಗಳು ಸೇರಿದಂತೆ ಗೋಪಾಲನ್‌ರಿಗೆ ಸಂಬಂಧಿಸಿದ ಕಟ್ಟಡಗಳಲ್ಲಿ ಈಡಿ ಶೋಧ ಕಾರ್ಯಾಚರಣೆ ನಡೆಸಿದೆ.

ಕಂಪೆನಿಯು ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ (ಫೆಮ)ಯನ್ನು ಉಲ್ಲಂಘಿಸಿದೆ ಎಂಬ ಆರೋಪಗಳ ಆಧಾರದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.

”ಗೋಕುಲಮ್ ಗೋಪಾಲನ್ ಮತ್ತು ಅವರ ಕಂಪೆನಿ ಶ್ರೀ ಗೋಪಾಲನ್ ಚಿಟ್ ಆಯಂಡ್ ಫೈನಾನ್ಸ್ ಕೊ ಲಿಮಿಟೆಡ್‌ ಗೆ ಸಂಬಂಧಿಸಿದ ಫೆಮ ಪ್ರಕರಣದಲ್ಲಿ ಎಪ್ರಿಲ್ 4ರಂದು ತಮಿಳುನಾಡು ಮತ್ತು ಕೇರಳ ರಾಜ್ಯದಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಯಿತು. ಕಾರ್ಯಾಚರಣೆಗಳ ವೇಳೆ 1.5 ಕೋಟಿ ರೂ. ಮೊತ್ತವನ್ನು ವಶಪಡಿಸಿಕೊಳ್ಳಲಾಯಿತು” ಶನಿವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಮೋಹನ್ ಲಾಲ್ ನಟನೆಯ ಬ್ಲಾಕ್‌ಬಸ್ಟರ್ ಚಿತ್ರ ‘ಎಲ್‌2: ಎಂಪುರಾನ್’ಗೆ ಸಂಬಂಧಿಸಿ ವಿವಾದಗಳು ತಲೆಯೆತ್ತಿದ ಬೆನ್ನಿಗೇ ಕೇಂದ್ರ ಸರಕಾರಕ್ಕೆ ಒಳಪಟ್ಟ ಅನುಷ್ಠಾನ ನಿರ್ದೇಶನಾಲಯವು ಈ ದಾಳಿಗಳನ್ನು ನಡೆಸಿದೆ. ಚಿತ್ರದಲ್ಲಿ ಗೋಧ್ರಾ ಗಲಭೆಯನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂಬುದಾಗಿ ಬಿಜೆಪಿ ಸೇರಿದಂತೆ ಬಲಪಂಥೀಯ ಸಂಘಟನೆಗಳು ಆರೋಪಿಸಿವೆ. ಗೋಧ್ರಾ ಗಲಭೆಯ ವಾಸ್ತವಾಂಶಗಳನ್ನು ಚಿತ್ರದಲ್ಲಿ ತಿರುಚಲಾಗಿದೆ ಎಂದು ಸಂಘ ಪರಿವಾರ ಹೇಳಿದೆ.

1,000 ಕೋಟಿ ರೂ. ಮೊತ್ತದ ಫೆಮ ಉಲ್ಲಂಘನೆ ನಡೆದಿದ್ದು, ಅದಕ್ಕಾಗಿ ಗೋಪಾಲನ್ ಮತ್ತು ಅವರ ಚಿತ್ರಗಳ ಬಗ್ಗೆ ತನಿಖೆ ತನಿಖೆ ಮಾಡಲಾಗುತ್ತಿದೆ ಎಂದು ಈಡಿ ಹೇಳಿದೆ.

Leave a Reply

Your email address will not be published. Required fields are marked *

You may have missed

error: Content is protected !!