ವಿಟ್ಲ: ದಿನಸಿ ಅಂಗಡಿಯಲ್ಲಿ ಕಾಣಿಸಿಕೊಂಡ ಬೆಂಕಿ: ಸ್ಥಳೀಯರ ಕಾರ್ಯಾಚರಣೆಯಿಂದ ತಪ್ಪಿದ ಭಾರೀ ದುರಂತ

ವಿಟ್ಲ: ವಿಟ್ಲದ ನಾಲ್ಕು ಮಾರ್ಗ ಜಂಕ್ಷನ್ ನಲ್ಲಿರುವ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ಸ್ಥಳೀಯರು ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ವಿಟ್ಲ-ಮಂಗಳೂರು ರಸ್ತೆಯಲ್ಲಿರುವ ನೆತ್ರಕೆರೆ ನಿವಾಸಿ ಮಹೇಶ್ ಭಟ್ ಅವರಿಗೆ ಸೇರಿದ ನೆತ್ರಕೆರೆ ಜನರಲ್ ಸ್ಟೋರ್ ನಲ್ಲಿ ಈ ಘಟನೆ ಸಂಭವಿಸಿದೆ.
ರಾತ್ರಿ ವೇಳೆ ಅಂಗಡಿ ಮಾಲಕ ಬಂದ್ ಮಾಡಿ ತೆರಳಿದ್ದರು. ಅಂಗಡಿ ಒಳಗಡೆಯಿಂದ ಹೊಗೆ ಕಾಣಿಸಿಕೊಂಡಿದ್ದು, ತಕ್ಷಣವೇ ಬಾಗಿಲು ತೆರೆದಾಗ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯ ಕಿಟ್ ಕ್ಯಾಟ್ ಪೆಟ್ ಶಾಪ್ ಅಂಗಡಿ ಮಾಲಕ ಇಸ್ಮಾಯಿಲ್ ಒಕ್ಕೆತ್ತೂರು ಅವರು ತನ್ನ ಅಂಗಡಿಯಲ್ಲಿದ್ದ ಫೈರ್ ಗ್ಯಾಸ್ ಮೂಲಕ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಅಂಗಡಿಯಲ್ಲಿದ್ದ ಕೆಲವು ವಸ್ತುಗಳು ಹಾನಿಯಾಗಿದೆ. ಸುತ್ತಮುತ್ತಲಿನಲ್ಲಿ ಹಲವು ಅಂಗಡಿಗಳು ಇದ್ದು, ಸರಣಿ ಅವಘಡ ತಪ್ಪಿದಂತಾಗಿದೆ.